Tuesday, November 24, 2026

ಪ್ರಾಯೋಗಿಕ ಆವೃತ್ತಿ

ಟೀಕೆಗಳಿಗೆ ತಲೆಕೆಡಿಕೊಳ್ಳುವುದಿಲ್ಲ ಅಭಿವೃದ್ದಿ ಮಾಡುತ್ತೇನೆ : ಶಾಸಕ ರವಿಕುಮಾರ್‌

ಟೀಕೆ ಮಾಡುವರು ಮಾಡಿಕೊಂಡು ಟೈಂಪಾಸ್‌ ಮಾಡಿಲಿ, ನಾವು ಅಭಿವೃದ್ದಿ ಮಾಡುತ್ತಿರುತ್ತೇವೆ ನಾವು ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ರವಿಕುಮಾರ್‌ಗೌಡ ಗಣಿಗ ಹೇಳಿದರು.

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿರುವ ಕೆರಗೋಡು ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವಣದಲ್ಲಿ ನಡೆದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಹಾಗೂ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ನಿರ್ಮಿಸಿರುವ ಪಂಚಾಯಿತಿ ಮೇಲಂತಸ್ತು ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಸಾಲಿನ ಕೆರಗೋಡು ಗ್ರಾಮ ಪಂಚಾಯಿತಿಯಲ್ಲ ಎಲ್ಲಾ ಸದಸ್ಯರು ಪಕ್ಷಬೇಧ ಮರೆತು ಒಳ್ಳೆಯ ಕೆಲಸ ಮಾಡಿದ್ದಾರೆ, ಕೋವಿಡ್ ಸಮಯದಲ್ಲಿ ಅನುದಾನ ಬಂದಿರಲಿಲ್ಲ, ಅವರ ಅವಧಿ ಇನ್ನೇನು ಮುಗಿಯುತ್ತದೆ, ಈಗ ಅಭಿವೃದ್ದಿಯಾಗುತ್ತಿವೆ ಎಂದರು.

ಕೆರಗೋಡಿನಲ್ಲಿ ಆಟೋಸ್ಯಾಂಟ್ ನಿರ್ಮಾಣಕ್ಕೆ ೫ ಲಕ್ಷ ಹಾಕಿದ್ದೀನಿ, ಅಭಿವೃದ್ದಿ ಮಾಡ್ತಿನಿ, ಕೋಡಿದೊಡ್ಡಿ ರಸ್ತೆ ಅಭಿವೃದ್ದಿಗೆ ೩ ಕೋಟಿ ರೂ.ಹಾಕಿದ್ದೀನಿ, ೫೦ ಲಕ್ಷ ರೂ.ಗಳ ಕೆಲಸ ಮಾಡಲಾಗುತ್ತಿದೆ, ೧೦ಕೋಟಿ ರೂ.ಗಳಲ್ಲಿ ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಯಾಗಲಿದೆ, ಶಿವರಾತ್ರಿ ಹಬ್ಬ ಆದ ತಕ್ಷಣ ಭೂಮಿಪೂಜೆ ಮಾಡ್ತಿನಿ ಎಂದರು.

ಮುಂದಿನ ತಿಂಗಳು ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಗೆ ಪೂಜೆ ಮಾಡಲು ಸಚಿವರು, ಸ್ವಾಮೀಜಿಗಳನ್ನು ಕರೆದು ಅದ್ದೂರಿ ಕಾರ್ಯಕ್ರಮ ಮಾಡಲಾಗುವುದು, ಕೆರೆ ಅಭಿವೃದ್ದಿ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ನವೀನ್‌ಕುಮಾರ್, ಉಪಾಧ್ಯಕ್ಷೆ ನಾಗರತ್ನ, ಇಂಜನಿಯರ್ ಸೋಮಶೇಖರ್, ಪಿಡಿಓ ವಿನಯ್‌ಕುಮಾರ್, ಕಾರ್ಯದರ್ಶಿ ರತ್ನಮ್ಮ, ಸದಸ್ಯರಾದ ಕೆ.ಜೆ.ಮಹೇಶ್, ಮುಖಂಡರಾದ ವಸಂತ್‌ಕುಮಾರ್, ಗ್ರಾ.ಪಂ.ಸದಸ್ಯರು, ಮುಖಂಡರು, ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ