ಈ ಬಾರಿ ಬೂದನೂರು ಉತ್ಸವದ ಅಂಗವಾಗಿ ಶಾಸಕ ರವಿಕುಮಾರ್ ಅವರ ನೇತೃತ್ವದಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಫೆ.17 ರಿಂದಲೇ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ-17 ಬೆಳಗ್ಗೆ 11 ಗಂಟೆಗೆ ಚಿತ್ರಕಲಾ ಸ್ಪರ್ಧೆಯನ್ನು (ಶಾಲಾ ಹಾಗೂ ಕಾಲೇಜು ಮಕ್ಕಳಿಗೆ) ಹೊಸ ಬೂದುನೂರಿನ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಫೆ. 18-19 ರಂದು ಕಸಬಾ ಹಾಗೂ ಮಂಡ್ಯ ಗ್ರಾಮಾಂತರದ 38 ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಅಲ್ಲದೇ ಕಬ್ಬಡಿ, ಹಗ್ಗಜಗಾಟ, ಗೋಣಿಚೀಲ ಓಟ, ಸೈಕಲ್ ರೇಸ್, ಓಟದ ಸ್ಪರ್ಧೆ, ಲೆಮೆನ್ ಸ್ಪೂನ್ ಆಟಗಳನ್ನು ವಿಶ್ವಮಾನವ ಶಾಲಾ ಮೈದಾನ ಕೊಮ್ಮೇರಳ್ಳಿಯಲ್ಲಿ ಆಯೋಜಿಸಲಾಗಿದೆ.

ಫೆ.20ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಂಡ್ಯ- ಗೋಪಾಲಪುರ ಮಧ್ಯದ ಮೈದಾನದಲ್ಲಿ ಹೆಲಿಕ್ಯಾಪ್ಟರ್ ರೈಡ್ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಹೊಸ ಬೂದನೂರು ದೇವಸ್ಥಾನದ ಆವರಣದಲ್ಲಿ ಆಹಾರಮೇಳ ಉದ್ಘಾಟನೆ, ಸಂಜೆ 4 ಗಂಟೆಗೆ ಹಳೇಬೂದನೂರಿಂದ ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ಬೂದನೂರು ದೇವಸ್ಥಾನ ಆವರಣದ ಬೃಹತ್ ಮೈದಾನದಲ್ಲಿ ಗುರುಕಿರಣ್ ನೈಟ್ ನಡೆಯಲಿದೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಹಲವಾರು ಚಲನಚಿತ್ರ ನಟ ನಟಿಯರ ಆಗಮಿಸಲಿದ್ದಾರೆ.
ಫೆ. ರಾತ್ರಿ ಹೊಸ ಬೂದನೂರಿನ ಬೃಹತ್ ಮೈದಾನದ ಆವರಣದಲ್ಲಿ ರಾಜೇಶ್ ಕೃಷ್ಣನ್ ಸಂಭ್ರಮ ಹಾಗೂ ಆಲ್ ಓಕೆ ತಂಡದಿಂದ ಮ್ಯೂಸಿಕಲ್ ಕಾರ್ಯಕ್ರಮ ನಡೆಯಲಿದೆ.




