Friday, November 20, 2026

ಪ್ರಾಯೋಗಿಕ ಆವೃತ್ತಿ

ಏಕರೂಪದ ವೇತನಕ್ಕಾಗಿ ಆಗ್ರಹಿಸಿ ರಕ್ತದಾನ ಚಳುವಳಿ

ಏಕರೂಪದ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ
ಸರ್ಕಾರದ ಗಮನ ಸೆಳೆಯಲು ಆ.15ರಂದು ರಕ್ತದಾನ ಮಾಡುವ ಮೂಲಕ ವಿನೂತನ ಚಳುವಳಿ ನಡೆಸುತ್ತೇವೆ ಎಂದು ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದ ಖಜಾಂಚಿ ಡಾ. ಯೋಗೇಂದ್ರಕುಮಾರ್ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘ ಖಜಾಂಚಿ ಡಾ. ಯೋಗೇಂದ್ರಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 8ನೇ ದಿನ ಮುಂದು ವರಿದಿದ್ದು, ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಧರಣಿಗೆ ಬೆಂಬಲ ನೀಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋದ ಕೇತರ ವೈದ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಮಾದರಿ ಯಂತೆ ಏಕರೂಪ ವೇತನ ನೀಡುವುದು ಅಗತ್ಯವಿದೆ,

2018ರ ಹೈಕೋರ್ಟ್ ಆದೇಶದಲ್ಲಿ ನೂತನ ಪರಿಷ್ಕೃತ ರಾಜ್ಯ ಸರ್ಕಾರಿ ವೇತನ ಶ್ರೇಣಿಯಂತೆ ವೇತನ ನೀಡಲು ಆಗ್ರಹಿಸುತ್ತಿದೇವೆ ಎಂದರು.
ಸಿಎಒ/ಐಸಿಎಒಗಳಿಗೆ ವಿಶೇಷ ಭತ್ಯೆ ತಡೆಹಿಡಿದ 2022ರ ಸರ್ಕಾರಿ ಆದೇಶ ರದ್ಧು ಮಾಡಿ, ಭ್ಯತೆ ಮುಂದುವರಿಸಿ, ಇಲ್ಲದಿದ್ದರೆ ರಾಜ್ಯಾದಂತ್ಯ ಹೋರಾಟ ನಡೆಸಲಾಗುವುದು. ಸಾಂಕೇತಿಕವಾಗಿ ಮಂಡ್ಯ ನಗರದಲ್ಲಿ ಧರಣಿ ನಡೆಸಲಾಗುತ್ತಿದೆ.ಎಲ್ಲರೂ ಇಲ್ಲಿಗೆ ಬಂದು ಬೆಂಬಲ ನೀಡುತ್ತಿದ್ದು,ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ವೈದ್ಯರುಗಳ ಪ್ರತಿಭಟನೆ ಮತ್ತು ಧರಣಿಯು 10 ದಿನಗಳವರಗೆ ನಿರ್ಧಾರ ವಾಗಿತ್ತು, 8ನೇ ದಿನ ಮುಂದು ವರಿದೆ, ಆ.೧?15ರಂದು ರಾಜ್ಯ ಸರ್ಕಾರದ ವಿರುದ್ಧ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ರಕ್ತದಾನ ಮಾಡುವ ಮೂಲಕ ವಿನೂತನ ಚಳುವಳಿಗೆ ಕರೆ ನೀಡಿದ್ದೇವೆ ಎಂದರು.

ಪ್ರತಿಭಟನಾ ಧರಣಿಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿಗಳಾದ ಶಿಲ್ಪ, ಡಾ.ಬ್ರಾಹ್ಮಿಣಿ, ಡಾ.ನಳಿ ನಾಕ್ಷಿ,ಡಾ.ಚೈತ್ರ, ಮಿಮ್ಸ್ ನ ಡಾ. ವಸಂತ್, ಡಾ,ಹರೀಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ