ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಕೊಪ್ಪ ಸಮೀಪದ ಗೂಳೂರು- ಚಿಕ್ಕದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆ ಬಿದ್ದಿದ್ದು, ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಹಲವು ದಿನಗಳಿಂದ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳ ಮೇಕೆಗಳ ಮೇಲೆ ದಾಳಿ ನಡೆಸಿದ್ದ ಚಿರತೆ ಸ್ಥಳೀಯರನ್ನು ಭಯಭೀತಗೊಳಿಸಿತ್ತು. ಇಂತಹ ದಾಳಿಗಳಿಂದ ಜನತೆ ಕಂಗಾಲಾಗಿದ್ದರು. ಇದರಿಂದಾಗಿ ಚಿರತೆ ಸೆರೆಗೆ ಬೋನು ಇಡಲಾಗಿತ್ತು. ಕೊನೆಗೂ ಅರಣ್ಯಾಧಿಕಾರಿಗಳಿಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವುದು ಆತಂಕ ಸ್ಥಿತಿಯನ್ನು ದೂರ ಮಾಡಿದೆ.
ಚಿರತೆ ಸೆರೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಅದನ್ನು ಮುಗಿಬಿದ್ದರು.




