ಎಲ್ಲರೂ ಸಮಾನರು ಎಂಬ ಆಶಯವನ್ನು ಒಳಗೊಂಡಿರುವ ಸಂವಿಧಾನದ ವಿಚಾರಗಳನ್ನು ಅರ್ಥೈಹಿಸಿಕೊಂಡು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೆಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ಕುಮಾರ್ ಹೇಳಿದರು.
ಮಂಡ್ಯ ನೆಹರು ನಗರದ ತಮಿಳು ಕಾಲೋನಿಯ 24ನೇ ವಾರ್ಡಿನಲ್ಲಿ ಜೈಭೀಮ್ ಸಂಘಟನೆ ವತಿಯಿಂದ ಎಲ್ಲರೊಳಗೊಂದಾಗು ವಿನಯ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಪುಸ್ತಕ, ಸೀರೆ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.

ಎಲ್ಲ ಮಕ್ಕಳಲ್ಲಿಯೂ ವಿದ್ಯೆ ಕಲಿಯುವ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಅವರ ಆಸಕ್ತಿಗೆ ತಕ್ಕಂತೆ ಅನುಗುಣವಾಗಿ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಗುರುತಿಸಿ, ಕೊಳಗೇರಿ ಮಕ್ಕಳು ನಾಳೆ ಐಎಎಸ್ ಮತ್ತು ಐಪಿಎಸ್ ನಂತಹ ಉತ್ತಮ ಹುದ್ದೆಗಳನ್ನು ಅಲಂಕರಿಸಲಿ ಎಂದು ಆಶಿಸಿದರು.
ನಮ್ಮ ಟ್ರಸ್ಟ್ನ ಮೂಲಕ ನಿರಂತರವಾಗಿ ಸಮಾಜಮುಖಿಯಾಗಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದೆ. ಎಲ್ಲರೂ ಸಮಾನರು ಎಂಬ ಉದ್ದೇಸವನ್ನಿಟ್ಟುಕೊಂಡು ಸಾಗುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಅವರು ಮಾತನಾಡಿದರು. ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಪಠ್ಯ ಸಾಮಾಗ್ರಿಗಳನ್ನು ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕದ ಸಂಚಾಲಕ ಸಂತೋಷ್ ಎಂ, ಮುಖಂಡರಾದ ಗುರು, ಅರಸು ಹಿಂದುಳಿತ ವೇದಿಕೆಯ ಎಲ್.ಸಂದೇಶ್, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಕೊಂಗನಾಟರ್ ಬಿ.ಸುರೇಶ್, ಪೆರುಮಾಳ್, ಶ್ರೀಕಾಂತ್, ಏಳುಮಲೈ, ಓಂಪ್ರಕಾಶ್, ಹಲಗನ್, ಬಾಬು, ವೆಂಕಟೇಶ್ ಸೇರಿದಂತೆ ಹಲವು ಭಾಗವಹಿಸಿದ್ದರು.




