Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಾ.4 ಕ್ಕೆ ಶಂಕರಗೌಡರ ಕುರಿತ ಗೀತನಮನ – ಪುಸ್ತಕಗಳ ಬಿಡುಗಡೆ

ಕರ್ನಾಟಕ ಸಂಘ ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ವತಿಯಿಂದ ಹಾಗೂ ಕೆವಿ ಶಂಕರಗೌಡ ಅಧ್ಯಯನ ಪೀಠದ ಸಹಯೋಗದಲ್ಲಿ ನಾಳೆ(ಮಾ.೪) ರಂದು ಶಂಕರ ಸಂಸ್ಮರಣೆ -೩೬ ಪ್ರಯುಕ್ತ ಶಂಕರಗೌಡರ ಕುರಿತ ಗೀತನಮನ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಸಂಘದ ಸಂಪನ್ಮೂಲ ವ್ಯಕ್ತಿ, ಚಿಂತಕ ಡಾ.ಎಸ್ ಬಿ ಶಂಕರಗೌಡ ತಿಳಿಸಿದರು.

ಅಂದು ಬೆಳಗ್ಗೆ ೧೧:೦೦ ಗಂಟೆಗೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಜನತಾ ಶಿಕ್ಷಣ ಟ್ರಸ್ಟ್ ನಿರ್ದೇಶಕ ಡಾ.ರಾಮಲಿಂಗಯ್ಯ ವಹಿಸಲಿದ್ದು, ಮಹಿಳಾ ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಸ್.ಶಿವರಾಮು ಶಂಕರಗೌಡ ಸಂಸ್ಮರಣೆ ಮಾಡುವರು ಇದೇ ಸಂದರ್ಭದಲ್ಲಿ ಪ್ರೊ.ಜಯಪ್ರಕಾಶಗೌಡರ ಎರಡು ಕೃತಿಗಳಾದ ಜನತಾ-೭೦ (ಎಪ್ಪತ್ತರ ಹಾದಿಯಲ್ಲಿ ಮಂಡ್ಯ ಜನತಾ ಶಿಕ್ಷಣ ಸಂಸ್ಥೆ) ಹಾಗೂ ನೆನಪು ಮಾಸುವ ಮುನ್ನ (ವ್ಯಕ್ತಿ ಚಿತ್ರ ವಿಹಾರ) ಕೃತಿಗಳನ್ನು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಬಿಡುಗಡೆ ಮಾಡುವರು. ಕೆ ವಿ ಶಂಕರಗೌಡ ಸಂಸ್ಮರಣೋತ್ಸವ ಅಂಗವಾಗಿ ಗಾಮನಹಳ್ಳಿ ಸ್ವಾಮಿ ಮತ್ತು ತಂಡ ಕೆ ವಿ ಶಂಕರಗೌಡರನ್ನು ಕುರಿತ ಗೀತೆಗಳ ಗೀತಗಾಯನ ನಡೆಸಿಕೊಡಲಿದೆ.ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ ೬ ರಂದು ೨ ನೇ ವರ್ಷದ ಜೆಪಿ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಸಂಘದ ವತಿಯಿಂದ ಮಾರ್ಚ್ ೬ ರ ಶುಕ್ರವಾರ ಸಂಜೆ ೫.೩೦ ಕ್ಕೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎರಡನೇ ವರ್ಷದ ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ ತಿಳಿಸಿದರು.

ಪ್ರಸ್ತುತ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಪ್ರೊ.ಡಾ.ಬಿ.ಜಯಪ್ರಕಾಶಗೌಡ ಅವರು ಸಾಹಿತ್ಯ,ಸಂಸ್ಕೃತಿ, ರಂಗಭೂಮಿ, ಸಂಶೋಧನೆ,ಸAಘಟನೆ ಹೀಗೆ ಹಲವು ರಂಗಗಳಲ್ಲಿ ತೊಡಗಿಸಿಕೊಂಡು ನಾಡಿನ ಗಮನ ಸೆಳೆದಿದ್ದಾರೆ.ಇವರ ಹೆಸರಿನಲ್ಲಿ ಕೊಡಮಾಡುವ ರಂಗ ಸಂಘಟಕ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೀನಿವಾಸ ಜಿ ಕಪ್ಪಣ್ಣ ಅವರಿಗೆ ಹಾಗೂ ರಂಗಕರ್ಮಿ ಪ್ರಶಸ್ತಿಯನ್ನು ಬೆಂಗಳೂರಿನ ರಂಗಕರ್ಮಿ ಶಶಿಧರ್ ಭಾರಿಘಾಟ್ ಅವರಿಗೆ ೫೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಾನಿಧ್ಯವನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ವಹಿಸಲಿದ್ದಾರೆ. ಉದ್ಯಮಿಗಳಾದ ವೆಂಕಟರಮಣಗೌಡ(ಸ್ಟಾರ್ ಚಂದ್ರು) ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು,ಆಂಧ್ರಪ್ರದೇಶದ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಜಯಪ್ರಕಾಶ್‌ಗೌಡ ದಂಪತಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ನಿರ್ದೇಶಕರಾದ ಮಂಜುಳಾ ಉದಯಶಂಕರ್, ಎಚ್.ಬಿ.ನಾಗಪ್ಪ ಹನಕೆರೆ, ಬಾಲಕೃಷ್ಣ ಹಾಗೂ ವತ್ಸಲಾ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ