Friday, October 11, 2024

ಪ್ರಾಯೋಗಿಕ ಆವೃತ್ತಿ

ಪಿಎಸ್ಐ ನೇಮಕಾತಿ : ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷನ ಬಂಧನ

ಪಿಎಸ್ಐ ನೇಮಕಾತಿ ಆಕ್ರಮದಲ್ಲಿ ದಿನಕಳೆದಂತೆ ಆರೋಪಿಗಳ ಬಂಧನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು ಯಾವ ರಾಜಕಾರಣಿ,ಅಭ್ಯರ್ಥಿ, ಪೋಲೀಸ್ ಅಧಿಕಾರಿಗೆ ಸಿಐಡಿ ಕೋಳ ತೊಡಿಸುತ್ತೋ ಎಂದು ರಾಜ್ಯದ ಜನ ಕುತೂಹಲದಿಂದ ಕಾಯುತ್ತಿದ್ದರೆ, ಅಕ್ರಮದಲ್ಲಿ ಭಾಗಿಯಾದವರು ನನ್ನ ಯಾವಾಗ ಬಂಧಿಸುತ್ತಾರೋ ಎಂಬ ಭೀತಿಯಿಂದ ದಿನದೂಡುವಂತಾಗಿದೆ. ಇಂದು ಕೂಡ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂಬ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣನನ್ನು ಸಿಐಡಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ.

ನಾಗಮಂಗಲ ಪಟ್ಟಣ ವಾಸಿಯಾದ ಶರತ್ ರಾಮಣ್ಣ, ಬಿಇ, ಎಂಟೆಕ್ ಪದವೀಧರನಾಗಿದ್ದು, ಕಳೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದ. ಈತ ಕಳೆದ ಲೋಕಸಭಾ ಚುನಾವಣಾ ಅವಧಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತ ಅಂಬರೀಷ್ ಪರವಾಗಿ ಪ್ರಚಾರ ಮಾಡಿದ್ದ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನದಿಂದ ಪಕ್ಷ ವಜಾ ಮಾಡಿತ್ತು.

ಸಾಕಷ್ಟು ಸ್ಥಿತಿವಂತನಾಗಿದ್ದ ಈತ, ಫೈನಾನ್ಸಿಯರ್, ಚಲನಚಿತ್ರ ನಿರ್ಮಾಪಕ, ಉದ್ಯಮಿಯೂ ಆಗಿದ್ದ. ಈತನ ಒಡೆತನದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿಯೇ ಕಾಂಗ್ರೆಸ್ ಪಕ್ಷದ ಕಚೇರಿ ಮತ್ತು ಎನ್.ಚಲುವರಾಯಸ್ವಾಮಿ ಅವರ ಕಚೇರಿ ಇದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿದ್ದ ಈತ ಪಕ್ಷದ ಸದಸ್ಯತ್ವ ನೊಂದಣಿಯಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದ.

ಈಗ ಪಿಎಸ್ಐ ನೇಮಕಾತಿ ಆಕ್ರಮದಲ್ಲಿ ಈತನೂ ಪಾಲ್ಗೊಂಡಿದ್ದ ಎಂದು ಹೇಳಲಾಗಿದ್ದು, ಶ್ರವಣಬೆಳಗೊಳ ಮೂಲದ ವ್ಯಕ್ತಿಯಿಂದ ಸುಮಾರು 40 ಲಕ್ಷ ಹಣ ಪಡೆದಿದ್ದ ಎಂಬ ಆರೋಪವು ಈತನ ಮೇಲಿದೆ.ಈತನ ವಿಚಾರಣೆ ನಡೆಯುತ್ತಿದ್ದು ಯಾವ ಅಭ್ಯರ್ಥಿಗಳಿಂದ ಎಷ್ಟು ಹಣ ಪಡೆದಿದ್ದ, ಯಾರ್ಯರು ಈತನಿಗೆ ಸಹಕಾರ ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!