ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317 ಜಿ , ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆ ಮತ್ತು ಸ್ಪಂದನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಆಯೋಜಿಸಲಾಗಿತ್ತು.
ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲಯನ್ ಚಂದ್ರಹಾಸ್ ಅಧ್ಯಕ್ಷೆತೆಯಲ್ಲಿ ನಡೆದ ಶಿಬಿರದಲ್ಲಿ ಬಿಪಿ ಮತ್ತು ಶುಗರ್ ತಪಾಸಣೆ ಮಾಡಲಾಯಿತು. ವಾಯುವಿಹಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.
ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317 ಜಿ 2ನೇ ಉಪ ಜಿಲ್ಲಾ ರಾಜ್ಯಪಾಲರಾದ ಲಯನ್ ಟಿ.ನಾರಾಯಣ್ ಸ್ವಾಮಿ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು , ಇಂದಿನ ಕಾಲದಲ್ಲಿ ಬಿಪಿ, ಶುಗರ್ ಹೆಚ್ಚುತ್ತಿದೆ , ಹೀಗಾಗಿ ಇಂತಹ ಆರೋಗ್ಯ ತಪಾಸಣೆ ಶಿಬಿರ ಉಪಯೋಗವಾಗುತ್ತದೆ , ಈ ಮೂಲಕ ಸಮಸ್ಯೆಗಳು ಗೊತ್ತಾಗುತ್ತೆ ಎಂದರು. ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ಹೀಗಾಗಿ ಸಂಸ್ಥೆಯ ಮೊದಲ ಹೆಜ್ಜೆಯಾಗಿ ಈ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ನುಡಿದರು.
ಕ್ವೆಸ್ಟ್ ಕೋ-ಆರ್ಡಿನೇಟರ್ ಲಯನ್ ಆನಂದ್ ಮಾತನಾಡಿ , ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂತಹ ಅರೋಗ್ಯ ತಪಾಸಣೆ ಶಿಬಿರವನ್ನು ನಡೆಸುತ್ತ ಬರುತ್ತಿದ್ದರೆ ಈ ಸಂಸ್ಥೆ ಇನ್ನು ಹೆಚ್ಚಿನ ಕಾರ್ಯಕ್ರಮವನ್ನು ಮಾಡಲಿ ಎಂದು ಆಶಿಸಿದರು.
ಚಂದ್ರಹಾಸ್ ಮಾತನಾಡಿ , ದಿನ ನಿತ್ಯದ ಜೀವನದಲ್ಲಿ ಒತ್ತಡದಲ್ಲಿ ಬಿಪಿ ಮತ್ತು ಶುಗರ್ ಸಾಮಾನ್ಯವಾಗಿದೆ , ಇಂತಹ ಶಿಬಿರದಲ್ಲಿ ಪರೀಕ್ಷೆಗೆ ಒಳಪಡಿಸಿಕೊಂಡಾಗ ತಮ್ಮ ನಿತ್ಯ ಜೀವನದ ಶೈಲಿಯನ್ನು ಬದಲಾವಣೆ ಮಾಡಿಕೊಂಡಾಗ ಆರೋಗ್ಯ ಸುಧಾರಣೆ ಆಗಲಿದೆ ಎಂದರು.
ಮಾಧ್ಯಮ ಮತ್ತು ಪ್ರಚಾರ ಜಿಲ್ಲಾಧ್ಯಕ್ಷ ಲಯನ್ ಎಲ್.ಕೃಷ್ಣ ಮಾತನಾಡಿ , ನಮ್ಮ ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆ ಹಲವಾರು ಕಾರ್ಯಕ್ರಮವನ್ನು ಮಾಡುತ್ತ ಬಂದಿದ್ದೇವೆ , ಗಿಡ ನೆಡುವುದು , ಆರೋಗ್ಯ ತಪಾಸಣೆ ಶಿಬಿರ , ಹಸಿವು ನಿವಾರಣೆ , ಕಣ್ಣಿನ ತಪಾಸಣೆ , ದಂತ ತಪಾಸಣೆ ಶಿಬಿರವನ್ನು ಪ್ರತಿವರ್ಷ ಮಾಡುತ್ತ ಬರುತ್ತಿದ್ದೇವೆ ಎಂದರು. ಸಾರ್ವಜನಿಕರು ತಮ್ಮ ನಿತ್ಯ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ವ್ಯಾಯಾಮ , ವಾಕಿಂಗ್ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಲಯ ಅಧ್ಯಕ್ಷರಾದ ಸಿ.ಜೆ.ಸುಜಾತಕೃಷ್ಣ ಮಾತನಾಡಿ , ನಿಯಮಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಕಾಲದಲ್ಲಿ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ಸ್ಪಂದನ ಆಸ್ಪತ್ರೆಯ ಡಾ.ಮನೋಜ್ ಮಾತನಾಡಿ , ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಹಲವು ರೋಗಗಳಿಗೆ ಕಾರಣವಾಗುತ್ತಿವೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ ಡಾ.ಕೃಷ್ಣಗೌಡ ಹುಸ್ಕೂರು , ಲಯನ್ ಕೆ.ಆರ್.ಶಿವಲಿಂಗೇಗೌಡ , ಲಯನ್ ರಾಕೇಶ್ , ಲಯನ್ ಹನುಮಂತಯ್ಯ , ಲಯನ್ ನಾಗೇಶ್ , ಲಯನ್ ಡಾ.ಚಂದ್ರಶೇಖರ್ ಮಂಜುನಾಥ್ ಲಯನ್ ಉಮಾ ಬಿ.ಜೆ ವಿನುತಾ ಶೋಭಾ ವೆಂಕಟೇಶ್ ಸರಸ್ವತಿ ಸರಳಕುಮಾರಿ ಸೇರಿದಂತೆ ಮತ್ತಿತರರಿದ್ದರು.




