Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು : ಸುವರ್ಣ ಭವನಕ್ಕೆ ನೆರವು : ಹರೀಶ್ ಬಾಬು

ಸಂಘದ ಐವತ್ತು ವರ್ಷದ ಹಾದಿ ಸ್ಮರಣಿಯಾವಾಗಿ ಸುವಲ್ಲಿ ಸುವರ್ಣ ವರ್ಷಾಚರಣೆ ನೆನಪಿನ ತರಬೇತಿ ಭವನ ನಿರ್ಮಾಣಕ್ಕೆ ಮದ್ದೂರು ಕ್ಷೇತ್ರದ ಶಾಸಕ ಉದಯ್ ಅವರಿಂದ ಅನುದಾನ ಕೊಡಿಸುವುದಾಗಿ ಮನ್ ಮುಲ್ ನೀರ್ದೆಶಕ ಹರೀಶ್ ಬಾಬು ಭರವಸೆ ನೀಡಿದರು

ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗು ಸುವರ್ಣ ವರ್ಷಾಚರಣೆ ಸಿದ್ದತೆ ಚಾಲನೆ ಸಭೆ ಉದ್ಘಾಟಿಸಿ ಮಾತನಾಡಿದರು

ಸಂಘದ ಆಡಳಿತ ಮಂಡಳಿ ಹಾಗು ಸದಸ್ಯರು ಗಳಿಗೆ ಸ್ಥಳಿಯಾವಾಗಿಯೆ ಆಡಳಿತಾತ್ಮಕ ಹಾಗು ವೈಜ್ಞಾನಿಕ ಹೈನೊಧ್ಯಮ‌ ಕುರಿತುತರಬೇತಿ ದೊರೆಯುವಂತಾಗ ಬೇಕು ಈ ನಿಟ್ಟಿನಲ್ಲಿ ತಾಲ್ಲೊಕಿನಲ್ಲಿ ಪ್ರಥಮ ವಾಗಿ ತರಬೇತಿ ಕೇಂದ್ರದ ಅಲೊಚನೆಯೊಂದಿಗೆ ತರಬೇತಿ ಭವನ ಆರಂಭಿಸಿರುವ ನಗರಕೆರೆ ಹಾಲು ಉತ್ಪಾದಕರ ಸಂಘದ ಕ್ರಮ ಮಾದರಿಯಾದದ್ದು ಎಂದು ಶ್ಲಾಘಿಸಿದರು

ಮೈಸೂರಿನಲ್ಲಿ ನೀಡಲಾಗುತ್ತಿರುವ ತರಬೇತಿಯನ್ನು ಇನ್ನು ಮುಂದೆ ಸ್ತಳೀಯಾವಾಗಿಯೇ ಕೊಡಿಸಲು ಈ‌ ತರಬೇತಿ ಕೇಂದ್ರ ಪೂರಕವಾಗಲಿದೆ ಎಂದು ಅಭಿಪ್ರಾಯ ಪಟ್ಟ ಅವರು ಮಾರಸಿಂಗನಹಳ್ಳಿ ತಮ್ಮ ಸಂಘದಲ್ಲೂ ತರಬೇತಿ ಭವನ ನಿರ್ಮಾಣ ಮಾಡಿ ಕೊಪ್ಪ ಹೊಬಳಿ ಭಾಗದ ತರಬೇತಿಗೆ ಅನೂಕೂಲವಾಗಿಸುವ ವಿಶ್ವಾಸ ವ್ಯಕ್ತಪಡಿಸಿದರು

ಮನ್ ಮುಲ್ ನಿರ್ದೆಶಕ ಎಸ್ ಪಿ ಸ್ವಾಮಿ ಯವರು
ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿ ನಗರಕೆರೆ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಯವರ ಸಮಯ ಪ್ರಜ್ಞೆ , ದೂರದೃಷ್ಠಿತ್ವ,
ದ ಫಲವಾಗಿ ರೂಪುಗೊಳ್ಳುತಿಹ ಸುವರ್ಣ ಮಹೊತ್ಸವ ಕಾರ್ಯಕ್ರಮ ಇತರೆ ಸಂಘಗಳಿಗೆ ಮಾದರಿಯಾದದ್ದು ಎಂದರು.

ಹಾಲು ಉತ್ಪಾದನೆ ಖರ್ಚು ಕಡಿಮೆ ಮಾಡುವ ಜೊತೆಗೆ ನಿರ್ವಹಣೆ ಸುಲಭಗೊಳಿಸುವ ನಿಟ್ಟಿನಲ್ಲಿ ಮಿಶ್ರತಳಿ ರಾಸುಗಳ ಜೊತೆಗೆ ಉತ್ತಮ ತಳಿಯ ಎಮ್ಮೆ ಸಾಕಾಣಿಕೆ ಕಡೆಗೂ ಸಂಘ ಒತ್ತುಕೊಟ್ಟು ಪ್ರಾಯೊಗಿಕವಾಗಿ
ಕೆಲವು ಸದಸ್ಯರಿಗೆ ಎಮ್ಮೆ‌ಕೊಡಿಸಲು ಸಲಹೆ ನೀಡಿದರು

ಉಪಕಚೇರಿಯ ವ್ಯವಸ್ಥಾಪಕ ಡಾ. ಮಂಜೇಶ್ ಗೌಡ ಮಾತನಾಡಿ ಕಾಮನ್ ಸಾಪ್ಟ್ ವೇರ್ ಅಳವಡಿಕೆ ಯಿಂದ ಉತ್ಪಾದಕರಿಗೆ ಹಾಲಿನ ಮೌಲ್ಯಕ್ಕೆ ತಕ್ಕ ಬೆಲೆ ದೊರೆತು ಉತ್ಪಾದಕರಿಗೆ ಹೆಚ್ಚಿನ‌ ಲಾಭ ಸಿಗುವ ಜೊತೆಗೆ ಗುಣಮಟ್ಟದ ಹಾಲು ಉತ್ಪಾದನೆಗೂ ಪೂರಕವಾಗಿದೆ ಎಂದರು

ಮನ್ ಮುಲ್ ವಿಸ್ತರಣಾಧಿಕಾರಿ ರತ್ನಮ್ಮ
ಅಧ್ಯಕ್ಷರಾದ ರೂಪರಾಜಶೇಖರ್ ,ಉಪಾಧ್ಯಕ್ಷ ರಾಜಶೇಖರ್,ನಿರ್ದೇಶಕರಾದ ನ.ಲಿ.ಕೃಷ್ಣ, ಎನ್ ಎಸ್ ಶೇಖರ, ಶಿವಲಿಂಗಯ್ಯ, ದನಂಜಯ್ಯ, ಕರಿಯಪ್ಪ, ಸದಸ್ಯರುಗಳಾದ ಮಾಜಿ ತಾ ಪಂ ಸದಸ್ಯೆ ಎನ್ ಎಲ್ ಯಶೊದಮ್ಮ, ಯಾಜಮಾನ್ ವಿಷಕಂಠಯ್ಯ, ಶಿವರಾಮು, ಪಾಪಣ್ಣ, ಎನ್ ಸಿ ರಾಮಲಿಂಗಯ್ಯ , ಎನ್ ಎಸ್ ಮಹದೇವು, ಎನ್ ಆರ್ ರಾಜಶೇಖರ, ಚಿಕ್ಕಮೊಗ, ಸುವರ್ಣಮ್ಮ, ಗೌರಮ್ಮ, ವಿಜಯಲಕ್ಷ್ಮಿ, ಹನುಮಂತೇಗೌಡ, ಸತೀಶ್ ,ಸದಾನದ ಸಂಘದ ಸಿ ಇ ಓ ಕಿರಣ್ ಕುಮಾರ್ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ