Saturday, November 21, 2026

ಪ್ರಾಯೋಗಿಕ ಆವೃತ್ತಿ

ಪೌರಕಾರ್ಮಿಕರೊಂದಿಗೆ ಸಾಮೂಹಿಕ ಭೋಜನ

ಪಾಂಡವಪುರ ಪುರಸಭೆ ಆಡಳಿತದ ವತಿಯಿಂದ ಪೌರಕಾರ್ಮಿಕ ಕುಟುಂಬಸ್ಥರು ಹಾಗೂ ಜನಪ್ರತಿನಿಧಿಗಳಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.

ಪುರಸಭೆ ಆವರಣದಲ್ಲಿ ನಡೆದ ವಿಶೇಷ ಔತಣಕೂಟದಲ್ಲಿ ಪೌರ ಕಾರ್ಮಿಕರ ಕುಟುಂಬಸ್ಥರ ಜೊತೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು ಹಾಗೂ ಪುರಸಭೆ ಸದಸ್ಯರು ಸಾಮೂಹಿಕವಾಗಿ ಭೋಜನ ಸ್ವೀಕರಿಸಿ, ಸಮಾನತೆಯ ಸಂದೇಶ ಸಾರಿದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ,75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿಜವಾಗಿಯೂ ಯಾರಿಗೆ ಗೌರವ ಸಲ್ಲಿಸಬೇಕು ಎಂದು ಅರ್ಥೈಸಿಕೊಂಡು ಪೌರಕಾರ್ಮಿಕರನ್ನು ಗುರುತಿಸಿ ಅಭಿನಂದನೆ ಸಲ್ಲಿಸುವ ಕೆಲಸ ಮಾಡಿರುವ ಪುರಸಭೆ ಅಧ್ಯಕ್ಷರು, ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪೌರ ಕಾರ್ಮಿಕರ ಕುಟುಂಬಸ್ಥರ ಜೊತೆಯಲ್ಲಿ ಜನಪ್ರತಿನಿಧಿಗಳು ಸಾಮೂಹಿಕವಾಗಿ ಊಟ ಮಾಡಿದ್ದು ತುಂಬಾ ಖುಷಿ ತಂದುಕೊಟ್ಟಿದೆ.ಪೌರಕಾರ್ಮಿಕರು ದಿನನಿತ್ಯ ಪಟ್ಟಣವನ್ನು ಸ್ವಚ್ಛಗೊಳಿಸಿ ಸುಂದರವಾಗಿಟ್ಟಿದ್ದಾರೆ.

ಅವರ ಶ್ರಮದ ಕೆಲಸದಿಂದ ಪಟ್ಟಣ ನೆಮ್ಮದಿಯ ತಾಣವಾಗಿದೆ ಎಂದ ಅವರು,ಪೌರಕಾರ್ಮಿಕರಿಗೆ ಸಲ್ಲಿಸಿದ ಗೌರವದಿಂದ ಸಂತೋಷವಾಗಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ