ವಕೀಲರಸಂಘದ ಅಭಿವೃದ್ಧಿಗಾಗಿ ಅರ್ಹನಿಶಿ ಶ್ರಮಿಸುವುದಾಗಿ ಮದ್ದೂರು ವಕೀಲರ ಸಂಘದ ಅಧ್ಯಕ್ಷಸ್ಥಾನದ ಪರಾಜಿತ ಅಭ್ಯರ್ಥಿ ಪಿ ಮಲ್ಲೇಶ್ ತಿಳಿಸಿದರು.
ವಕೀಲರ ಸಂಘದ ಚುನಾವಣೆಯಲ್ಲಿ ವಿಜೇತರಾದ ಪದಾಧಿಕಾರಿಗಳನ್ನು ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಅಭಿನಂದಿಸಿ ಮಾತನಾಡಿದರು.
ನಮ್ಮತಂಡ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ವಕೀಲರಸಂಘದ ಚುಕ್ಕಾಣಿ ಹಿಡಿಯುವ ಮೂಲಕ ಸಂಘದ ಅಭಿವೃದ್ದಿಗಾಗಿ ಶ್ರಮಿಸಿದ್ದೇವೆ.
ನಮ್ಮ ತಂಡದ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿಯ ಹೆಜ್ಜೆಗುರುತುಗಳನ್ನು ದೃಡವಾಗಿ ಮೂಡಿಸಿದ್ದೆವೆ ಎಂದು ವ್ಯಾಖ್ಯಾನಿಸಿದ ಅವರು ವಕೀಲರ ಸಂಘದ ಭವನ ನಿರ್ಮಾಣ ಸಂಘದ ಮೂಲಭೂತ ಸೌಕರ್ಯ ಮಾದರಿಯಾಗಿ ರೂಪಿಸಿದ್ದು ಸುಸಜ್ಜಿತ ಸಭಾಂಗಣ ನಿರ್ಮಿಸಿದ್ದು ವಕೀಲರ ಜ್ಞಾನರ್ಜನೆಗಾಗಿ ಇ-ಗ್ರಂಥಾಲಯ ಆರಂಬಿಸಿದ್ದು
ನ್ಯಾಯಲಯದ ಕಟ್ಟಡ ವಿಶಾಲಸ್ಥಳದಲ್ಲಿ ನಿರ್ಮಿಸುವಂತಾಗಲು ಶ್ರಮಿಸಿ ರೇಷ್ಮೆ ಇಲಾಖೆಗೆ ಸೇರಿದ ನಾಲ್ಕುಮೂಕ್ಕಾಲು ಎಕರೆ ಜಾಗ ಮಂಜೂರು ಮಾಡಿಸಿದ್ದಾಗಿ ತಿಳಿಸಿದರು.
ಪ್ರಸ್ತುತ ಚುನಾವಣೆಯಲ್ಲಿ ನಮ್ಮತಂಡ ಬಹುಮತ ಸಾಧಿಸಿದ್ದು ಒಂಬತ್ತು ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ನಮ್ಮತಂಡ ವಿಜಯಸಾಧಿಸಿದ್ದು
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಾತ್ರ ವಿರೋಧಿ ಬಣದ ಜಯಗಳಿಸಿವೆ ಎಂದ ಮಲ್ಲೇಶ್ ಅವರು ಪ್ರಸ್ತುತ ಅವಧಿಯಲ್ಲೂ ಕೂಡ ನೂತನ ಕಾರ್ಯಕಾರಿಮಂಡಳಿಗೆ ಅಭಿವೃದ್ದಿಯ ನೆಲೆಗಟ್ಟಿನಲ್ಲಿ ಸಹಕಾರ ನೀಡಲಾಗುವುದು ಎಂದರು.
ನೂತನ ಪ್ರಧಾನಕಾರ್ಯದರ್ಶಿ ಹಿರಿಯ ವಕೀಲರಾದ ನಿರ್ದೇಶಕರಾದ ಎಮ್.ಜೆ. ಸುಮಂತ್ ಹಾಗೂ ವಿ ಎಸ್ ಪ್ರವೀಣ್ ಕುಮಾರ್ ಎನ್ ಎಸ್ ಪ್ರಸನ್ನ, ಬಿ ಸುವರ್ಣ, ಸಿ ಆರ್ ಚೈತ್ರಾ ಕಿರಿಯ ವಕೀಲರ ವಿಭಾಗದಿಂದ ಜಯ ಸಾಧಿಸಿದ ಬಿ ಸುವರ್ಣ ಸಿ ಆರ್ ಚೈತ್ರಾ ಟಿ ಎಸ್ ಸುನೀಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಜಿ.ಎನ್.ಸತ್ಯ, ಬಿ.ಅರ್ ರಾಮಕೃಷ್ಣ, ಬಿ. ವಿ. ಶಿವರಾಮ್, ಸ್ವಾಮಿ, ಶೋಭ, ವಿಜಯಕುಮಾರ್, ಪ್ರಭಾಕರ್ ಶೇಖರ್, ಜಗದೀಶ್, ಎಂ.ಸಿ.ಆಶೋಕ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




