Saturday, May 18, 2024

ಪ್ರಾಯೋಗಿಕ ಆವೃತ್ತಿ

ದೇಶ ಮುನ್ನಡೆಯಲು ಯುವಶಕ್ತಿಯ ಪಾತ್ರ ಪ್ರಧಾನ : ಕೆ.ನಾಗಣ್ಣಗೌಡ

ದೇಶ ಸಶಕ್ತವಾಗಿ ಮುನ್ನಡೆಯಲು ಯುವಶಕ್ತಿಯ ಪಾತ್ರ ಪ್ರಧಾನವಾದದ್ದು, ಸೂಕ್ತ ಶಿಕ್ಷಣದ ಮುಖೇನ ವ್ಯಕ್ತಿತ್ವ ರೂಪಿಸಿಕೊಂಡು ಯುವಜನರು ದೇಶದ ಭವಿಷ್ಯವನ್ನು ಬರೆಯಬಲ್ಲರು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕೆ.ನಾಗಣ್ಣಗೌಡ ಹೇಳಿದರು.

ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಸೇವೆಯಲ್ಲಿ ನಿರತವಾಗಿರುವ ಯುವಶಕ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಗಲ ಪರಿಸರ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ ವತಿಯಿಂದ ನಡೆದ ಯುವ ವಿವೇಕ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸಿದ್ದರೆ ಮಾರ್ಗ ಎಂಬ ಹೆಗ್ಗಳಿಕೆಯ ಮಾತಿನ ಜೊತೆಗೆ ದೇಶವನ್ನು ಸುಭದ್ರವಾಗಿ ಕಟ್ಟುವ ಕಟ್ಟಾಳುಗಳು ಯುವಜನರು, ಯುವ ಶಕ್ತಿ ಉತ್ತಮ ಮಾರ್ಗದಲ್ಲಿ ಬದ್ಧತೆಯೊಂದಿಗೆ ನಡೆಯಬೇಕಿದೆ ಎಂದರು .

ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಆನಂದ್.ಸಿ. ಹೆಗ್ಗಡೆ ಅವರು ವಿವೇಕ ಪುರಸ್ಕೃತರಾದ ಕೆ.ಎಸ್ ಶ್ರೀಕಾಂತ್ ಗೌಡ, ರಕ್ಷಿತ್ ಕೆ.ಎಸ್, ಸಂಜಯ್ ಕೆ.ಬಿ, ಕಿರಣ್ ಹೆಚ್.ಕೆ, ಮಾನಸ ಆರ್ ಅವರಿಗೆ ಯುವ ವಿವೇಕ ಪುರಸ್ಕಾರವನ್ನು ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಂಗಲ ಪರಿಸರ ರೂರಲ್ ಡೆವೆಲಪ್ ಮೆಂಟ್ ಸೊಸೈಟಿಯ ಅಧ್ಯಕ್ಷ ಮಂಗಲ ಎಂ ಯೋಗೀಶ್, ಸಂಸ್ಕೃತಿ ಚಿಂತಕ ಎಂ.ಜಿ.ಎನ್. ಪ್ರಸಾದ್, ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಶೋಧನಾಧಿಕಾರಿ ವೈ.ಕೆ.ಭಾಗ್ಯ, ಎನ್.ಸಿ.ಸಿ ಅಧಿಕಾರಿ ಸುರೇಶ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!