ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಿಲ್ಲಾ ಬಿಜೆಪಿ ಶ್ರದ್ದಾಂಜಲಿ ಸಲ್ಲಿಸಿದೆ.
ನಗರದ ವಿಕಾಸ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಉಮೇಶ್ ಕತ್ತಿ ಅವರ ಅಕಾಲಿಕ ಮರಣಕ್ಕೆ ಶೋಕ ವ್ಯಕ್ತಪಡಿಸಿದರು.
ಕತ್ತಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದರು ಎಂದರು.
ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮಾತನಾಡಿ, ಬೆಲ್ಲದ ಬಾಗೇವಾಡಿಯಂತಹ ಕುಗ್ರಾಮದಲ್ಲಿ ಅತ್ಯಂತ ಶ್ರೀಮಂತ ಮನೆತನದ ಉಮೇಶ್ ಕತ್ತಿ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು ಎಂದು ತಿಳಿಸಿದರು.
ಬಿಜೆಪಿ ಮುಖಂಡ ವಸಂತ್, ನಗರಸಭಾ ಸದಸ್ಯರಾದ ಚಂದ್ರು, ಶಿವು, ಕೆಂಪಯ್ಯ, ಪ್ರಸನ್ನ, ಶಿವಲಿಂಗಯ್ಯ, ನಾಗಣ್ಣ ಮಲ್ಲಪ್ಪ, ಹರ್ಷ ಉಪಸ್ಥಿತರಿದ್ದರು.




