Saturday, November 21, 2026

ಪ್ರಾಯೋಗಿಕ ಆವೃತ್ತಿ

ಅಕ್ರಮ ಖಾತೆ ಮಾಡಲು ಹುನ್ನಾರ: ಗ್ರಾ.ಪಂ.ಸದಸ್ಯರ ಪ್ರತಿಭಟನೆ


  • ಜುವಾರಿ ಗಾರ್ಡನ್ ಸಿಟಿ ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ
  • ಕೆಆರ್‌ಎಸ್ ಪಂಚಾಯಿತಿಗೆ ಅಕ್ರಮವಾಗಿ 23 ಖಾತೆ
  • ಕಾರ್ಯದರ್ಶಿ ಶಿವಲಿಂಗಯ್ಯ ಹಾಗೂ ಸಿಬ್ಬಂದಿಗಳು ಜುವಾರಿ ಗಾರ್ಡನ್ ಸಿಟಿ ಅವರೊಂದಿಗೆ ಶಾಮೀಲು

ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾ.ಪಂ.ನ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಜುವಾರಿ ಗಾರ್ಡನ್ ಸಿಟಿಯವರಿಗೆ ಅಕ್ರಮವಾಗಿ ಖಾತೆಗಳನ್ನು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕೆಲ ಸದಸ್ಯರು ಗ್ರಾ.ಪಂ.ಎದುರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ರಾಮು ಮಾತನಾಡಿ,ಜುವಾರಿ ಗಾರ್ಡನ್ ಸಿಟಿಯವರು ಅಕ್ರಮವಾಗಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಒತ್ತುವರಿ ಜಮೀನಿನ ಪರಿಶೀಲನೆ ಹಾಗೂ ಸರ್ವೆ ನಡೆಸುವ ಸಂಬಂಧ ಈಗಾಗಲೇ ಪತ್ರ ವ್ಯವಹಾರ ನಡೆಸಿದ್ದಾರೆ.

ಹೀಗಿದ್ದರೂ ಸಹ ಪಂಚಾಯಿತಿ ಕಾರ್ಯದರ್ಶಿ ಶಿವಲಿಂಗಯ್ಯ ಹಾಗೂ ಸಿಬ್ಬಂದಿಗಳು ಜುವಾರಿ ಗಾರ್ಡನ್ ಸಿಟಿ ಅವರೊಂದಿಗೆ ಶಾಮೀಲಾಗಿ ಪಂಚಾಯಿತಿ ಸದಸ್ಯರುಗಳ ಗಮನಕ್ಕೆ ತರದೆ ಅಕ್ರಮವಾಗಿ ಖಾತೆ ಮಾಡಿಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಜುವಾರಿ ಗಾರ್ಡನ್ ಸಿಟಿಗೆ ಸಂಬಂಧಿಸಿದ ಸಂಪೂರ್ಣ ಕಡತಗಳು ಗ್ರಾ.ಪಂ.ನಲ್ಲಿ ನಾಪತ್ತೆಯಾಗಿದ್ದು, ಸದಸ್ಯರುಗಳ ವಿರೋಧವಿದೆ ಎಂಬ ಕಾರಣಕ್ಕೆ ಕಾರ್ಯದರ್ಶಿ ಶಿವಲಿಂಗಯ್ಯ ಕೆಆರ್‌ಎಸ್ ಪಂಚಾಯಿತಿಗೆ ತೆರಳಿ ಅಕ್ರಮವಾಗಿ 23 ಖಾತೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಅಧ್ಯಕ್ಷರ ನೇತೃತ್ವದಲ್ಲಿ ತುರ್ತು ಸಭೆ ಕರೆದರೂ ಸಭೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಿ.ಪಂ.ನಲ್ಲಿ ತುರ್ತು ಸಭೆ ಇದೆ ಎಂದು ನೆಪ ಹೇಳಿದರೆ, ಕಾರ್ಯದರ್ಶಿ ಶಿವಲಿಂಗಯ್ಯ ಅನಾರೋಗ್ಯದ ಕಾರಣ ಹೇಳಿ, ಇಬ್ಬರೂ ಸಭೆಗೆ ಗೈರಾಗುವ ಮೂಲಕ ಅಧ್ಯಕ್ಷರಿಗೆ ಅಗೌರವ ತೋರಿಸಿದ್ದಾರೆ ಎಂದು ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭನೆಯಲ್ಲಿ ಅಧ್ಯಕ್ಷೆ ಸುಶೀಲ, ಸದಸ್ಯರಾದ ರಾಮು, ಹರೀಶ್, ವೈರಮುಡಿಗೌಡ ಕರೀಗೌಡ, ರಾಮಕೃಷ್ಣ, ಶ್ವೇತಕೃಷ್ಣ, ನರಸಿಂಹಚಾರ್, ರೇಣುಕಾ ಮತ್ತಿತರರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ