ಚಲಿಸುತ್ತಿದ್ದ ಖಾಸಗಿ ಪ್ರವಾಸಿ ಬಸ್ಸೊಂದು ಹೊತ್ತಿ ಉರಿದು ಭಸ್ಮವಾಗಿರುವ ಘಟನೆ ಹೊಸ ಬೂದನೂರು ಬಳಿಯ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಬೆಳಿಗ್ಗೆ 2 ಗಂಟೆಯಲ್ಲಿ ಜರುಗಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅಶೋಕ್ ಟ್ರಾವೆಲ್ ಏಜೆನ್ಸಿಗೆ ಸೇರಿದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್’ನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಹೊರಗಿಳಿಸಿದ್ದಾರೆ. ಕ್ಷ
ಣಾರ್ಧದಲ್ಲಿ ಬಸ್ ಬೆಂಕಿಗೆ ಅಹುತಿಯಾಗಿದೆ. ಬಸ್’ನಲ್ಲಿದ್ದ ಪ್ರಯಾಣಿಕರ ಬಟ್ಟೆಗಳು, ಡೇಕೋರೇಷನ್ ವಸ್ತುಗಳು, ಬಸ್ಸಿನ ಬಿಡಿ ಭಾಗಗಳು ಸೇರಿದಂತೆ ಸಂಪೂರ್ಣ ಬೆಂಕಿಗೆ ಭಸ್ಮವಾಗಿದೆ. ಘಟನೆಯಿಂದಾಗಿ ₹ 30 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




