ಮಂಡ್ಯ ನಗರದ ಸೇವಾಕಿರಣ ಸಭಾಂಗಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ವತಿಯಿಂದ ತಹಶೀಲ್ದಾರ್ ಕುಂಇ ಅಹಮದ್ ಅವರ ತಂದೆಯವರ ಜನ್ಮದಿನ ಅಂಗವಾಗಿ ವೃದ್ಧರಿಗೆ ಪೌಷ್ಠಿಕ ಆಹಾರ ಮತ್ತು ಹಣ್ಣು-ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಇ ಅಹಮದ್ ಮಾತನಾಡಿ, ಬಾಲ್ಯದ ದಿನಗಳಲ್ಲಿ ತಂದೆ-ತಾಯಿ ಕಲಿಸಿದ ಸಂಸ್ಕಾರ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರಣೆಯಾಗಿದೆ, ಇಂದಿನ ಆಧುನಿಕ ಜೀವನದಲ್ಲಿ ಸರಳತೆ ಮತ್ತು ಅರ್ಥ ಪೂರ್ಣವಾದ ಬದುಕು ಅತ್ಯಾವಶ್ಯಕ ಎಂದರು.
ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿ, ತಹಸೀಲ್ದಾರ್ ಕುಂಇ ಅಹಮದ್ ಅವರು ಜನಸ್ನೇಹಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಉತ್ತಮ ಆಡಳಿತಕ್ಕೆ ಅವರ ಕಾರ್ಯತತ್ಪರತೆ ಮಾದರಿಯಾಗಿದೆ ಎಂದರು.
ಜಾನಪದ ಗಾಯಕರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್ ತಂಡ ವಿವಿಧ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ‍್ಯಕ್ರಮದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಸೇವಾಕಿರಣ ಸಂಸ್ಥೆ ಕಾರ್ಯದರ್ಶಿ ಜಿ.ವಿ.ನಾಗರಾಜ್ ಮತ್ತಿತರರಿದ್ದರು.




