Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಾಕ್ಷರತಾ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿ : ಕವಿತಾ

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಾಕ್ಷರತಾ ಕಾರ್ಯಕ್ರಮವನ್ನು ಹಂತ ಹಂತವಾಗಿ, ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಅನುಷ್ಠಾನಗೊಳಿಸಿದರೆ  ಗುರಿ ತಲುಪಲು ಸಾಧ್ಯವಾಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದು ಜಿ.ಪಂ ಮುಖ್ಯಲೆಕ್ಕಾಧಿಕಾರಿ ಕವಿತಾ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತಿ ಮಿನಿ ಸಭಾಂಗಣದಲ್ಲಿ 2022- 23ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನದ  ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧರಿಸಿ ಭಾರತದಲ್ಲಿರುವ ಎಲ್ಲಾ ಅನಕ್ಷರಸ್ಥರಿಗೆ ಮೂಲ ಶಿಕ್ಷಣ, ಸುಲಭ ಲೆಕ್ಕಚಾರ, ಜೀವನ ಕೌಶಲ್ಯ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯದ ಅವಕಾಶ ಹಾಗೂ ಮುಂದುವರೆದ ಕಲಿಕೆ ನೀಡುವುದರ ಮೂಲಕ 2030 ರವರಗೆ ಶೇ.100 ರಷ್ಟು ಸಾಕ್ಷರತೆ ಹೊಂದುವ ಉದ್ದೇಶವನ್ನು ಸಾಕಾರಗೊಳಿಸಬೇಕೆಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮ ವಯಸ್ಕರಿಗೆ ಸೀಮಿತವಲ್ಲ. 15 ವರ್ಷ ಮೇಲ್ಪಟ್ಟ ಎಲ್ಲರನ್ನು ಸಾಕ್ಷರನ್ನಾಗಿಸಿ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಸಾಕ್ಷರತಾ ಕಾರ್ಯಕ್ರಮದ ಸದಾಶಯ ಎಂದರು.

ವಿದ್ಯುನ್ಮಾನ, ತಂತ್ರಜ್ಞಾನ, ಜಾನಪದ, ಸ್ಥಳೀಯ ಕಲೆ ಸಂಸ್ಕೃತಿ, ಮಾಧ್ಯಮ ಬಳಕೆ, ನಾವೀನ್ಯ ರೀತಿಯ ಯೋಜನೆ, ತಂತ್ರಜ್ಞಾನ ಮೂಲಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಧನರಾಜ್ ಬೋರಳೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಜವರೇಗೌಡ, ಬಿಇಓ ಚಂದ್ರಕಾಂತ, ಮಹದೇವ, ಚಿಕ್ಕಸ್ವಾಮಿ, ಡಾ.ಭವಾನಿ ಶಂಕರ್,ಜಿಲ್ಲಾ ಕೌಶಲ್ಯಾಭಿವೃದ್ಧಿಅಧಿಕಾರಿ ವೇಣುಗೋಪಾಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ