ಸುಡುಗಾಡಿನೊಳಗೆ ಒಬ್ಬನೆ ನಿಂತು
ಜಾತಿ ಧರ್ಮಗಳ ಚಿತೆಯೊಳಗಿಟ್ಟು
ಬೇಯಿಸುತ್ತಿದ್ದೇನೆ
ಪೂರ ಬೇಯುತ್ತಿಲ್ಲ ಬೆಂಕಿ ಸರಿ ಉರಿಯುತ್ತಿಲ್ಲ
ಬೇಡಿಕೊಳ್ಳುವೆನು ತೋಡಿಸಿಕೊಂಡಿರುವ
ಬೇಡಿಗಳಿಂದ ಬಿಡಿಸಿಕೊಂಡು
ಒಂದೊಂದೆ ಕಟ್ಟಿಗೆಗಳ ಕೈಯಲ್ಲಿಡಿದುಕೊಂಡು
ತನ್ನಿ ಗೋಡೆಮೇಲೆ ಒಣಗುತ್ತಿರುವ ಬೆರಣಿಗಳನ್ನು
ಆಕಾಶಕ್ಕೆ ಹೊಗೆ ತಾಕುವ ಹಾಗೆ
ನದಿಗಳೆ ಬೆದರಿ ಬೆಚ್ಚುವ ಹಾಗೆ
ಬೆಂಕಿಯನಿಟ್ಟು ಬೂದಿಯ ಬಿಡುವ
ಬೀಡುಬಿಟ್ಟಿರುವ ಅಸಮಾನತೆಯ
ತೊಡೆದೊಡೆದೋಡಿಸಿ
ತಂಪಿನ ಕಂಪಿನ ತಂಗಾಳಿಯ
ಕರೆಬರೆಸೆಳೆಯುವ
ಎಲ್ಲರೂ ಕೂಡಿ ಮಾನವ ದೀಕ್ಷೆಯ ಪಡೆಯುವ
– ಶ್ರಮ ಕುಮಾರ್





ಜಾತಿ ಧರ್ಮಗಳು ಚಿತೆಯೊಳಗೆ..
ಶೀರ್ಷಿಕೆಯೇ ಅದ್ಭುತವಾಗಿದೆ..ಪ್ರಸ್ತುತ ಜಾತಿ ಧರ್ಮಗಳು ಚಿತೆಯಿಂದ ಎದ್ದುಬಿಟ್ಟಿವೆ.