Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸೆಪ್ಟೆಂಬರ್ 19 ಮಂಡ್ಯದಲ್ಲಿ ಬೃಹತ್ ರೈತ ಸಮಾವೇಶ

ಮಂಡ್ಯದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ನಲ್ಲಿ ರಾಜ್ಯ ರೈತ ಸಂಘವು ಬೃಹತ್ ರೈತ ಸಮಾವೇಶ ನಡೆಸಲು ಸಿದ್ಧವಾಗಿದೆ.

ಮಳೆಯಿಂದ ಹೆಚ್ಚು ಬೆಳೆಹಾನಿ ಉಂಟಾಗಿದ್ದರು ಸರ್ಕಾರ ಸರಿಯಾಗಿ ಪರಿಯಾರ ನೀಡಲು ಹಿಂದೇಟು ಆಕಿದೆ. ಸರ್ಕಾರ ಕೂಡಲೇ ಸ್ಪಂದಿಸಬೇಕು. ಹಾಗು ರೈತ ಸಮಾವೇಶದಲ್ಲಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ನಿರ್ಣಯ ಮಂಡಿಸುತ್ತೇವೆ. ಜೊತೆಗೆ ರಾಜ್ಯಾದ್ಮಂತ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುತ್ತೇವೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಾಡ ಹಬ್ಬ ದಸರಾವನ್ನು ಈ ಭಾರಿ ಸರಳವಾಗಿ ಆಚರಿಸಬೇಕು. ರಾಜ್ಯದ ಜನತೆ ಅತಿವೃಷ್ಟಿಯಿಂದ ಕಂಗಾಲಾಗಿದ್ದಾರೆ. ಉತ್ಸವದ ಹಣವನ್ನು ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೆ ಪರಿಯಾರವಾಗಿ ನೀಡಬೇಕು.

ಹಾಗೇಯೆ ಕಬ್ಬು ಬೆಳೆಗಾರರಿಗೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಈಡೇರಿಸದಿರುವುದರಿಂದ, ದಸರಾ ವೇಳೆ ಮೈಸೂರಿನಲ್ಲಿ ರೈತ ಸಂಘ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಪ್ರಸನ್ನ.ಎನ್ ಗೌಡ,ಪಿ ಮರಂಕಯ್ಯ, ಮಂಡಕಳ್ಳಿ ಮಹೇಶ್, ಹೊಸಕೋಟೆ ಬಸವರಾಜು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ