Tuesday, November 24, 2026

ಪ್ರಾಯೋಗಿಕ ಆವೃತ್ತಿ

ಜಲಾಶಯಕ್ಕೆ ಶಾಸಕ ಅನ್ನದಾನಿ ಬಾಗಿನ

ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಭೀಮಾ ಜಲಾಶಯ ಹಾಗೂ ಬ್ಯಾಡರಹಳ್ಳಿ ಕೆರೆ ತುಂಬಿರುವುದರಿಂದ ಶಾಸಕ ಡಾ.ಕೆ.ಅನ್ನದಾನಿಯವರು ಬಾಗಿನ ಅರ್ಪಿಸಿದರು.

ನಂತರ ಮಾತಾನಾಡಿದ ಅವರು, ಸುಮಾರು ಇಪ್ಪತೈದು ವರ್ಷಗಳ ನಂತರ ಭೀಮಾ ಜಲಾಶಯ ಕೋಡಿ ಬಿದ್ದು ಹರಿಯುತ್ತಿದೆ, ಈ ಭಾಗದ ಮುನ್ನೂರು ಎಕರೆ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರು.

ನನ್ನ ಅಧಿಕಾರ ಅವಧಿಯಲ್ಲಿ ನಾಲ್ಕು ಬಾರಿ ಕೆರೆಗಳಿಗೆ ಬಾಗಿನ ಅರ್ಪಿಸಿದ್ದೇನೆ, ಮೂರು ತಿಂಗಳ ಹಿಂದೆಯೇ ಬಾಗಿನ ಅರ್ಪಿಸಬೇಕಿತ್ತು ಕಾರಣಾಂತರದಿಂದ ಮುಂದೂಡಿಕೆ ಆಯಿತು, ಬ್ಯಾಡರಹಳ್ಳಿ, ಹಲಗೂರು, ನಿಟ್ಟೂರು ಕೆರೆಗಳು ನೀರು ತುಂಬಿವೆ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ, ಇವತ್ತು ಬಹಳ ಸಂತೋಷವಾಗಿದೆ 25  ವರ್ಷಗಳ ನಂತರ  ಮೊದಲ ಬಾರಿಗೆ ಕೆರೆಗೆ ಬಾಗಿನ ಅರ್ಪಿಸಿದ್ದೇನೆ, ಬಹಳ ಹೆಮ್ಮೆಯಿದೆ ಎಂದು ತಿಳಿಸಿದರು.

ಮನ್ ಮುಲ್ ನಿರ್ದೇಶಕ ವಿಶ್ವನಾಥ್ ಮಾತನಾಡಿ, ನನ್ನನ್ನು ಈಗ ತಾಲ್ಲೂಕು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ . ಯಾವುದೇ ಸಂದರ್ಭದಲ್ಲೂ ನನಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

ಹಲಗೂರು ಹೋಬಳಿ ಜೆಡಿಸ್ ಅಧ್ಯಕ್ಷ ತಮ್ಮಣ್ಣಗೌಡ, ಪಟೇಲ್ ರಾಜಣ್ಣ, ರಾಮಚಂದ್ರೇಗೌಡ
ಹಾಗೂ ದೊಡ್ಡಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ