Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಇಜ್ಜಲಘಟ್ಟದಲ್ಲಿ ಸಚಿವ ಚಲುವರಾಯಸ್ವಾಮಿ, ಚಿನಕುರುಳಿಯಲ್ಲಿ ಪುಟ್ಟರಾಜು ಮತದಾನ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟ ಗ್ರಾಮದ ಮತಗಟ್ಟೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಇಂದು ಮಧ್ಯಾಹ್ನ ಮತದಾನ ಮಾಡಿದರು.

ಅವರೊಂದಿಗೆ ಪತ್ನಿ ಧನಲಕ್ಷ್ಮಿಚಲುವರಾಯಸ್ವಾಮಿ ಹಾಗೂ ಪುತ್ರ ಸಚ್ಚಿನ್ ಚಲುವರಾಯಸ್ವಾಮಿ ಅವರು ಮತ ಚಲಾಯಿಸಿದರು.

ಪುಟ್ಟರಾಜು ಮತದಾನ

ಮಾಜಿ ಸಚಿವ, ಜೆಡಿಎಸ್ ನಾಯಕ ಸಿ.ಎಸ್.ಪುಟ್ಟರಾಜು ಅವರು ಪತ್ನಿ ನಾಗಮ್ಮ ಅವರೊಂದಿಗೆ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಲ್ಲಿ ಇಂದು ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾನ ಎನ್ನುವುದು ಪ್ರಜಾಪ್ರಭುತ್ವನ್ನು ರಕ್ಷಿಸಲು ಸಂವಿಧಾನ ನಮ್ಮ ಕೈಗೆ ನೀಡಿರುವ ಅಸ್ತ್ರ. ಅದನ್ನು ಜವಾಬ್ದಾರಿಯುತವಾಗಿ ಬಳಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪ್ರಜೆಗಳು‌ ಮತ್ತು ಪ್ರಜಾಪ್ರಭುತ್ವದ ಹಿತ ರಕ್ಷಣೆಯನ್ನು ಮನನ ಮಾಡಿಕೊಂಡು ನನ್ನ ಮತ ಚಲಾಯಿಸಿದ್ದೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!