Saturday, November 21, 2026

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್‌ ನೌಕರರಿಗೆ ಮತ್ತಷ್ಟು ಸೌಲಭ್ಯ 

ಬ್ಯಾಂಕ್ ನೌಕರರಿಗೆ ನನ್ನ ಅಧಿಕಾರಾವಧಿಯಲ್ಲಿ ನಿವೇಶನ ಕೊಡಿಸಿದ್ದೇನೆ, ಇನ್ನೂ ಒಂದು ವರ್ಷದ ಅವಧಿಯಿದ್ದು ಜನಪ್ರತಿನಿಧಿಗಳ ಸಹಾಯದಿಂದ ಮತ್ತಷ್ಟು ಸೌಲಭ್ಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಬ್ಯಾಂಕ್‌ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಭರವಸೆ ನೀಡಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಬ್ಯಾಂಕ್‌ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 25ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೇಶನ ಕೊಡಿಸಲಾಗಿದೆ, ಅದಕ್ಕೆ ಬೇಕಾದ ಮೂಲ ಸೌಲಭ್ಯ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ನೀಡುತ್ತೇನೆ ಎಂದರು.

ಉಪಾಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಟಿ.ಚಂದ್ರೇಗೌಡ, ನಿರ್ದೇಶಕರಾದ ಪಿ.ವಿ.ಪರಶುರಾಮ್‌, ಬರ್ನಾಡಪ್ಪ, ಶಿವನಂಜೇಗೌಡ, ಮರೀಗೌಡ, ಲೀಲಾಧರ, ಇಂದುಮತಿ, ರೇವಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ