ಜಿಲ್ಲೆಯ ಹಿರಿಯ ರಾಜಕಾರಣಿ ದಿವಂಗತ ಎ.ಸಿ.ಶ್ರೀಕಂಠಯ್ಯ ಅವರ 25ನೇ ವರ್ಷದ ಪುಣ್ಯ ಸ್ಮರಣಾರ್ಥ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಎ.ಸಿ.ಶ್ರೀಕಂಠಯ್ಯ ಹಾಗೂ ರವೀಂದ್ರ ಶ್ರೀಕಂಠಯ್ಯ ಅಭಿಮಾನಿಗಳು ಸಿಹಿ ಹಾಗೂ ಹಣ್ಣು ಹಂಚುವ ಮೂಲಕ ಸ್ಮರಿಸಿದರು.
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಎ.ಸಿ ಶ್ರೀಕಂಠಯ್ಯ ಅವರ ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಕಾಡಾ ಮಾಜಿ ಸದಸ್ಯ ಹೆಚ್.ಕೆ. ಅಶೋಕ್ ಅವರ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು ತೆರಳಿ ರೋಗಿಗಳು, ನಾನ್‌ಕ್ಲಿನಿಕಲ್ ಸಿಬ್ಬಂದಿ, ವೈದ್ಯರು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳಿಗೆ ಹಣ್ಣು ಹಾಗೂ ಸಿಹಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಚ್.ಕೆ.ಅಶೋಕ್ ಮಾತನಾಡಿ, ಎ.ಸಿ ಶ್ರೀಕಂಠಯ್ಯರವರು ಶ್ರೀಮಂತ ಮನೆತನದವರಾದರೂ ಜನ ಸಾಮಾನ್ಯರೊಂದಿಗೆ ಬೆರತು ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಅವರಂತೇ ಅವರ ಕುಟುಂಬದ ಸದಸ್ಯರು ಸಹ ಸಾಮಾನ್ಯ ಜನರ ಪರವಾಗಿ ಶ್ರಮಿಸುತ್ತಲೇ ಬಂದಿದೆ ಎಂದರು.
ಅರಕೆರೆ ಆಸ್ಪತ್ರೆ- ವೃದ್ದಾಶ್ರಮದಲ್ಲಿ ಹಣ್ಣು- ಹಂಪಲು ವಿತರಣೆ
ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಎ.ಸಿ. ಶ್ರೀಕಂಠಯ್ಯ ಅಭಿಮಾನಿಗಳು ತೆರಳಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಿದರು.
ನಂತರ ವೃದ್ದಾಶ್ರಮಕ್ಕೂ ತೆರಳಿದ ಅವರು, ಸಿಹಿ ಹಾಗೂ ಹಣ್ಣು ನೀಡಿದರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ಮರೀಗೌಡ, ಪುರಸಭೆ ಉಪಾದ್ಯಕ್ಷ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಎಸ್.ಪ್ರಕಾಶ್, ರವಿಕುಮಾರ್, ಮಾಜಿ ಸದಸ್ಯರಾದ ಜಿ.ಪಿ. ಲಿಂಗೇಗೌಡ, ಜಿ.ಪಿ.ಲಕ್ಷ್ಮಣ್, ಗಂಗಾಧರ್, ಬಾಲು, ವೈದ್ಯರಾದ ಡಾ. ವೆಂಕಟೇಶ್, ಡಾ.ಮಾರುತಿ ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.
ಇದನ್ನು ಓದಿ: ಎ.ಸಿ. ಶ್ರೀಕಂಠಯ್ಯ ವಿದ್ಯಾಸಂಸ್ಥೆ ಲೋಕರ್ಪಾಣೆ