Friday, October 18, 2024

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣ ಉಪಚುನಾವಣೆ| ನಿಖಿಲ್ ಎದುರು ಅಚ್ಚರಿಯ ‘ಕೈ’ ಅಭ್ಯರ್ಥಿ ; ಸುಳಿವು ನೀಡಿದ ಚಲುವರಾಯಸ್ವಾಮಿ

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಿಂದ ಅಚ್ಚರಿಯ ಅಭ್ಯರ್ಥಿ ಸ್ಪರ್ಧೆ ಮಾಡಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸುಳಿವು ನೀಡಿದ್ದಾರೆ.

ಮದ್ದೂರಿನ ತರಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪವಾಗುತ್ತಿರುವುದು ಅವರ ಪಕ್ಷದ ತೀರ್ಮಾನ ಏನಾದ್ರು ಮಾಡ್ಕೋಳ್ಳಲಿ, ಕುಮಾರಸ್ವಾಮಿ ಎಂಪಿ ಆಗೋವರೆಗೆ ಯೋಗೇಶ್ವರ್ ಬೇಕಿತ್ತು. ಅವರ ಸೆಟಲ್ ಅವರು ಮಾಡ್ಕೋಳ್ತಾರೆ ಅಷ್ಟೆ ಎಂದು ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್, ಅವರ ತಮ್ಮ ಅಥವಾ ಆಶ್ಚರ್ಯ ವ್ಯಕ್ತಿ ಯಾರಾದ್ರು ಹಾಗ್ತಾರೋ… ಯಾರೋ ಒಬ್ಬರನ್ನ ಅಭ್ಯರ್ಥಿ ಮಾಡ್ತೇವೆ. ತೀರ್ಮಾನ ಮಾಡಿದ್ದೇವೆ ಸೂಕ್ತ ಸಂದರ್ಭದಲ್ಲಿ ಘೋಷಣೆ ಮಾಡ್ತೇವೆ. ಸೋಲು,ಗೆಲುವು ಯಾರ ಕೈನಲ್ಲಿ ಇಲ್ಲ ಜನರು ತೀರ್ಮಾನ ಮಾಡ್ತಾರೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿ ಘೋಷಣೆ ಮಾಡ್ತೇವೆ ಎಂದರು.

ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದ ?

ಗೃಹ ಸಚಿವ ಪರಮೇಶ್ವರ್ -ಸತೀಶ್ ಜಾರಕಿಹೋಳಿ ಭೇಟಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದ ? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗಧಿ ಮಾಡಕ್ಕಾಗುತ್ತಾ?

ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ?

ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂಬ ಹೆಚ್ಡಿಕೆ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಎಂದು ಹರಿಹಾಯ್ದರು.

ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ. ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅನುಭವ ಇಲ್ಲ ಅದಕ್ಕೆ ಆ ತರ ಅಂತಾರೆ ಅಷ್ಟೆ. ಯಾವ ಸರ್ಕಾರ ಬಂದ್ರು ಅವರಿಗೆ ಅಧಿಕಾರ ಸಿಕ್ಕುದ್ರುನು ಪೂರ್ಣ ಅವಧಿಯನ್ನ ಮುಗಿಸೋಕೆ ಯಾವತ್ತು ರೆಡಿ ಇಲ್ಲ, ಅವರು ಜ್ಯೋತಿಷ್ಯ ಹೇಳೋದಾದ್ರೆ ಹೇಳಿ ನಮ್ಮವರು ಇದ್ದಾರೆ ಒಳ್ಳೆಯ ಜ್ಯೋತಿಷ್ಯ ಹೇಳುವವರಿದ್ದಾರೆ ಹೋಗಿ ಅಂತ ಹೇಳ್ತಿನಿ ಎಂದು ವ್ಯಂಗ್ಯವಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!