ಮದ್ದೂರಿನ ಡಿ2 ಡಯಾಗ್ನೋಸ್ಟಿಕ್ ಸೆಂಟರ್ ಗೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಸ್ಕ್ಯಾನಿಂಗ್ ಸೆಂಟರ್ ನ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಸ್ಕ್ಯಾನಿಂಗ್ ಮಾಡಿಸಿರುವ ಗರ್ಭಿಣಿ ಮಹಿಳೆಯರ ದಾಖಲೆಗಳು ಮತ್ತು ಫಾರಂಗಳನ್ನು ಪರಿಶೀಲನೆ ನಡೆಸಿದರು , ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿ ಮತ್ತು ಅನುಷ್ಠಾನಗೊಳಿಸಬೇಕು, ಗರ್ಭಿಣಿ ಮಹಿಳೆ ಹಾಗೂ ಬರುವ ಪೋಷಕರಿಗೆ ಜಾಗೃತಿ ಮೂಡಿಸಲು ಹಾಗೂ ಎಚ್ಚರಿಕೆ ನೀಡಿಲು ಶಿಕ್ಷೆ ಮತ್ತು ದಂಡ ಹಾಗು ಹೆಣ್ಣು ಮಕ್ಕಳ ಮಹತ್ವ ,ಲಿಂಗ ಪತ್ತೆ ಕಾನೂನು ಬಾಹಿರ ಎಂದು ಸಾರುವ ಜಾಗೃತಿ ಮೂಡಿಸುವ ಸೂಚನ ಫಲಕಗಳನ್ನು ಸ್ಥಳೀಯ ಬಾಷೆಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರದರ್ಶನ ಮಾಡಲು ಸೂಚಿಸಿದರು.
ದಾಖಲೆಗಳನ್ನು ಕಡ್ಡಾಯವಾಗಿ ಎರಡು ವರ್ಷಗಳವರಗೆ ಇಟ್ಟಿರಬೇಕು, ಬಾಲ ಗರ್ಭಿಣಿ ಬಂದಂತ ಸಂದರ್ಭದಲ್ಲಿ ತಾಲೂಕು ಆಡಳಿತಕ್ಕೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಮುಂದಿನ ಕ್ರಮಕ್ಕಾಗಿ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಿದರು ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಾಗುವುದು ಕಾನುನೂ ಉಲ್ಲಂಘನೆ ಮಾಡಿದರೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಕ್ರಮ ಕೈಗೊಳುತ್ತೇವೆ ಎಂದು ವೈದ್ಯರಿಗೆ ತಿಳಿಸಿದರು,
ತಪಾಸಣೆ ಸಂದರ್ಭದಲ್ಲಿ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಡಿ2 ಸ್ಕ್ಯಾನಿಂಗ್ ಸೆಂಟರ್ ಮಾಲೀಕ ಡಾ.ದೀಪಕ್ ಗೌತಮ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.




