ಮಳವಳ್ಳಿ ಪಟ್ಟಣದ ಸ್ಕ್ಯಾನಿಂಗ್ ಮತ್ತು ಲ್ಯಾಬ್ ಸೆಂಟರ್ ಗಳಿಗೆ ತಹಸೀಲ್ದಾರ್ ಕೆಎನ್ ಲೋಕೇಶ್ ನೇತೃತ್ವ ತಂಡದಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಣ್ಣು ಬ್ರೂಣ ಹತ್ಯೆ ಮಾಡುತ್ತಿರುವ ಘಟನೆ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನಲ್ಲಿ ಜಾಗೃತ ದಳ ತಂಡ ಮಾಡಿಕೊಂಡು ತಾಲೂಕಿನ ಸ್ಕ್ಯಾನಿಂಗ್ ಸೆಂಟರ್ ಮತ್ತು ರಕ್ತಪರೀಕ್ಷೆ ಸೆಂಟರ್ ಗಳ ಮೇಲೆ ಯಾವ ಸೆಂಟರ್ ಗಳು ಯಾವ ಮಟ್ಟದಲ್ಲಿ ಕೆಲಸ ಕಾರ್ಯ ಮಾಡುತ್ತಿದೆ ಎಂದು ಪರಿಶೀಲನೆ ಮಾಡಲಾಗಿದೆ ಎಂದರು.
ಪಟ್ಟಣದ ಗಂಗಾ, ದಯಾನಂದ, ಮಂದಾರ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ, ಅಲ್ಲಿನ ಕಡತಗಳು ಮತ್ತು ಬಾಣಂತಿಯರನ್ನು ವಿಚಾರಿಸಿದರು. ಸ್ಕ್ಯಾನಿಂಗ್ ಸೆಂಟರ್ ಗಳ ಮುಂದೆ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸೂಚನಾ ಫಲಕಗಳನ್ನು ಅಂಟಿಸಬೇಕು, ಹೆಣ್ಣು, ಗಂಡು ಎಂಬುದನ್ನು ಕಂಡುಹಿಡಿಯುವುದು ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ತಿಳಿಸಿದರು.
ಜ್ಯೋತಿ ರಕ್ತ ಪರೀಕ್ಷೆ ಕೇಂದ್ರ, ದಯಾನಂದ ನರ್ಸಿಂಗ್ ಹೋಮ್, ಮಹಾಲಕ್ಷ್ಮಿ ರಕ್ತ ಪರೀಕ್ಷೆ ಸೆಂಟರ್ ಗಳು ಸರಿಯಾದ ಕ್ರಮವನ್ನು ವಹಿಸಿಲ್ಲ ಎಂದು ನೋಟಿಸ್ ಅನ್ನು ಜಾರಿ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಳಿಯಲ್ಲಿ ತಾಲೂಕು ಪಂಚಾಯಿತಿ ಇ ಓ ಮಮತಾ, ಟಿ ಎಚ್ ಓ ವೀರಭದ್ರಪ್ಪ, ಸಿ ಡಿ ಪಿ ಓ ದೀಪ, ಪಿಎಸ್ಐ ಶರವಣ ಎಸ್ ರೆಡ್ಡಿ ಇದ್ದರು.




