Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಾಲೆಯಲ್ಲಿ ಸಿಲುಕಿಕೊಂಡ ಕಾಡಾನೆ ; ಹೊರ ತೆಗೆಯಲು ಹರಸಾಹಸ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬ್ಲಫ್ ಬಳಿ ಇರುವ ಪಯನಿಯರ್ ಜಂಕೋ
ಲಿಮಿಟೆಡ್ ನ ಪವರ್ ಜನರೇಶನ್ ಯುನಿಟ್‌ನ ಕ್ಯಾನಲ್‌ಗೆ ನೀರು ಬರುವ ನಾಲೆಯಲ್ಲಿ ಭಾನುವಾರ ಆನೆಯೊಂದು ಸಿಲುಕಿಕೊಂಡಿದ್ದು, ಅದನ್ನು ಹೊರ ತೆಗೆಯಲು ಆರಣ್ಯ ಇಲಾಖೆ ಸಿಬ್ಬಂದಿ ಕಸರತ್ತು ನಡೆಸಿದ್ದಾರೆ.

ಭಾನುವಾರ ಬೆಳಗ್ಗೆ 11.15ರ ಸಮಯದಲ್ಲಿ ಒಂದು ಗಂಡಾನೆಯು ಕಾವೇರಿ ನದಿಗೆ ಹೊಂದಿಕೊಂಡಿರುವ ಜಂಕೋ ಲಿಮಿಟೆಡ್ ನ ಪವರ್ ಜನರೇಶನ್ ಯುನಿಟ್‌ನ ಕ್ಯಾನಲ್‌ಗೆ ನೀರು ಬರುವ 20 ಅಡಿ ಆಳದ ನಾಲೆಯಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆನೆ ಇರುವುದನ್ನು ಖಚಿತಪಡಿಸಿಕೊಂಡು ನಾಲೆಯಿಂದ ಹೊರ ತೆಗೆಯುವ ಕುರಿತಾಗಿ ವಿಶ್ಲೇಷಿಸಿ ಕಾರ್ಯಾಚರಣೆ ಆರಂಭಿಸಿದರು.

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಆನೆಯನ್ನು ನಾಲೆಯ ಗೇಟ್
ಮುಖಾಂತರ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಕಾವೇರಿ ನದಿಯ ನೀರಿನ ಪ್ರಮಾಣವನ್ನು ಕಡಿಮೆ
ಮಾಡುವ ನಿಟ್ಟಿನಲ್ಲಿ ಕೆ.ಆರ್.ಎಸ್ ಮತ್ತು ಕಬಿನಿ ಡ್ಯಾಮ್‌ನ ಅಧಿಕಾರಿಗಳೊಂದಿಗೆ
ಚರ್ಚಿಸಿ ಡ್ಯಾಮ್ ನಿಂದ ನದಿಗೆ ಹೊರ ಬಿಡುತ್ತಿರುವ ನೀರನ್ನು ಕಡಿಮೆ ಮಾಡಲು/ಸ್ಥಗಿತಗೊಳಿಸಲು
ಕೇಳಿಕೊಳ್ಳಲಾಯಿತು.

ಆನೆಯ ಸುರಕ್ಷತೆ ದೃಷ್ಠಿಯಿಂದ ಆಹಾರವನ್ನು ಪೂರೈಸಲಾಗುತ್ತಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೋಮವಾರವು ಕೂಡ ಕಾರ್ಯಾಚರಣೆ ಮುಂದುವರೆಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೇನ್ ಮತ್ತು ಡ್ರೋನ್ ಸಹಾಯದಿಂದ ಆನೆಯನ್ನು ಗೇಟ್ ಮುಖಾಂತರ ಹೊರತೆಗೆಯಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗಿ ಗೇಟ್‌ನಿಂದ ಬರುವ ನೀರಿನ ರಭಸಕ್ಕೆ ಆನೆಯನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ವನ್ಯಜೀವಿ ವೈಧ್ಯರ ತಂಡ ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಯನ್ನು ಇನ್ನೂ ಹೆಚ್ಚಿನ ತಾಂತ್ರಿಕ ಹಾಗೂ ಹೆಚ್ಚಿನ ಸಾಮರ್ಥ್ಯದ ಕ್ರೇನ್ ಬಳಸಲು ತೀರ್ಮಾನಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ