ಮಂಡ್ಯ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿಯಾಗಿ ಕೋಮಲ್ ಕುಮಾರ್ ಎಸ್ ಎಸ್ ಅವರು ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಹಿರಿಯರ, ವಿಕಲಚೇತನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ, ಈ ಕೆಲಸ ನಿರ್ವಹಿಸಲು ಎಲ್ಲರ ಸಹಕಾರ ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಂ.ಸಿ ಲಂಕೇಶ್ ಹಾಗೂ ಪದಾಧಿಕಾರಿಗಳಾದ ಲೋಕೇಶ್ ಸಿ, ಮಂಜು ಟಿ, ಸುಬ್ರಹ್ಮಣ್ಯ, ರಕ್ಷಿತ್ ರಾಜ್, ಲಿಂಗಣ್ಣ, ಮಂಜುನಾಥ್ ಮಳವಳ್ಳಿ ಹಾಗೂ ಮಂಗಲ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ಗೌಡ ಹಾಗೂ ಮಾದೇವಸ್ವಾಮಿ ಉಪಸ್ಥಿತರಿದ್ದರು.




