ವರದಿ : ನ.ಲಿ.ಕೃಷ್ಣ
ದುಶ್ಚಟಗಳು ವ್ಯಕ್ತಿಯ ಬದುಕು,ಕುಟುಂಬ,ಮಾತ್ರವಲ್ಲದೆ ಸಮಾಜದ ಮೇಲೂ ಪರಿಣಾಮ ಬೀರಲಿವೆ. ಮದ್ಯ ವ್ಯಸನದಿಂದ ವ್ಯಸನಿಯ ಮೆದಳು ದೈಹಿಕ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿವೆ ಎಂದು ಜಿ. ಪಂ. ಮಾಜಿ ಆಧ್ಯಕ್ಷ ಕೊತ್ತನಹಳ್ಳಿ ಬಸವರಾಜ್ ಆತಂಕ ವ್ಯಕ್ತಪಡಿಸಿದರು.
ಮದ್ದೂರು ತಾಲೂಕು ಹುಲಿಗೆರೆಪುರ ಗ್ರಾಮದಲ್ಲಿ ಬೆಳಕು ಸೇವಾ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಶ್ರೀ ವಿನಾಯಕ ಡಿ ಆಡಿಕ್ಷನ್ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯ ವ್ಯಸನ ಕೇಂದ್ರಗಳು ದುಶ್ಚಟಕ್ಕೆ ಒಳಗಾದವರ ಪಾಲಿನ ಸಂಜೀವಿನಿಯಂತೆ ಕಾರ್ಯನಿರ್ವಹಿಸಲಿ ಎಂದು ಆಶಿಸಿದ ಅವರು ವ್ಯಸನ ಮುಕ್ತ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ವ್ಯಸನಿಗಳ ಕುಟುಂಬದಲ್ಲಿ ನೆಮ್ಮದಿಯನ್ನು ಮರುಸೃಷ್ಠಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ವ್ಯಸನ ಮುಕ್ತ ಕೇಂದ್ರ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಕದಲೂರು ರವಿಯವರು ಮಾತನಾಡಿ ಮದ್ದೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಅರಂಭವಾಗಿರುವ ಈ ಕೇಂದ್ರಗಳು ವ್ಯಸನ ಮುಕ್ತ ಸಮಾಜ ಸೃಷ್ಠಿಸುವ ದೆಸೆಯಲಿ ಯಶಸ್ವಿಯಾಗಲಿ ಎಂದರು.
ಮದ್ಯ ವ್ಯಸನದಿಂದ ವ್ಯಕ್ತಿ ಮತ್ತು ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಗಲಿದೆ. ಈ ಕುರಿತು ಹೆಚ್ಚೆಚ್ಚು ಆಪ್ತ ಸಮಾಲೋಚನೆಗಳು ಶಿಬಿರದಲ್ಲಿ ನಡೆಯಲಿ ಎಂದರು.
ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಬೊರೇಗೌಡ, ಕಾರ್ಯದರ್ಶಿ ಮನೋಜ್ ಎನ್. ಗೌಡ, ಉಪಾಧ್ಯಕ್ಷ ಶಿವಲಿಂಗೇಗೌಡ, ಟ್ರಸ್ಟಿಗಳಾದ ಸಾಗರ್, ಪ್ರವೀಣ್, ಲಿಖಿತ್ ಹಾಗೂ ಮಾಜಿ ಗ್ರಾ. ಪಂ. ಸದಸ್ಯ ಮನು. ಯೊಗೀಶ್. ನಗರಕೆರೆ ಪಂಚಲಿಂಗೇಗೌಡ. ಹುಲಿಗೆರೆಪುರ ಮಹಾದೇವ್, ಮಾಜಿ ಅಧ್ಯಕ್ಷ ಮಹಾದೇವ್ ಗ್ರಾ. ಪಂ. ಸದಸ್ಯ ರುದ್ರಯ್ಯ, ಉಪ್ಪಿನಕೆರೆ ಶಿವರಾಮು ಉಪಸ್ಥಿತರಿದ್ದರು.




