Friday, November 20, 2026

ಪ್ರಾಯೋಗಿಕ ಆವೃತ್ತಿ

ವಾತ್ಸಲ್ಯ ಮನೆ ಹಸ್ತಾಂತರ

ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ಗಂಗಮ್ಮ ಎಂಬುವವರಿಗೆ ವಾತ್ಸಲ್ಯ ಮನೆಯನ್ನು ಯೋಜನೆ ಮಂಡ್ಯ ಜಿಲ್ಲಾ ನಿರ್ದೇಶಕರಾಗಿರುವ ಎಂ.ಚೇತನ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ.ವಿ ಹೇಮಾವತಿ ಹೆಗ್ಗಡೆ ಯಾವರ ಮಾರ್ಗದರ್ಶನದಲ್ಲಿ ವಾತ್ಸಲ್ಯ ಯೋಜನೆಯಡಿ ಸಮಾಜದಲ್ಲಿರುವ ನಿರ್ಗತಿಕರನ್ನು ಗುರುತಿಸಿ ಅವರಿಗೆ ಆಹಾರ, ವಸ್ತ್ರ,ಗೃಹಪಯೋಗಿ ಪರಿಕರಗಳನ್ನು ಪ್ರಥಮ ಹಂತದಲ್ಲಿ ಒದಗಿಸಲಾಗಿದೆ.ಇದೀಗ ಮನೆಯಿಲ್ಲದ ಫಲನುಭವಿಗಳನ್ನು ಗುರುತಿಸಿ, ಅವರಿಗೆ ಮನೆ ಕಟ್ಟಿಸಿಕೊಡುವಂತಹ ಕಾರ್ಯವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಸುಮಾರು 35 ಮನೆಗಳ ನಿರ್ಮಾಣ ಮತ್ತು ದುರಸ್ತಿ ಕೆಲಸಗಳು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಆತ್ಮಾನಂದ, ಮಂಡ್ಯ ತಾಲೂಕು ಯೋಜನಾಧಿಕಾರಿ ಮಮತಾ ಎನ್. ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ವೇತಾ,ವಲಯ ಮೇಲ್ವಿಚಾರಕಿ ಸುರೇಖಾ, ಸೇವಾ ಪ್ರತಿನಿಧಿ ಪೂರ್ಣಿಮಾ ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ