Saturday, November 21, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಕೃಷಿಕ ಸಮಾಜದ ಚುನಾವಣೆ ; ಮಂಜುನಾಥ್ ಗೌಡ ತಂಡಕ್ಕೆ ಗೆಲುವು

2025- 26 ನೇ ಸಾಲಿನ ನಾಗಮಂಗಲ ತಾಲೂಕು ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ ನಡೆದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಶೆಟ್ಟಹಳ್ಳೀ ಮಂಜುನಾಥ್ ಗೌಡ ನೇತೃತ್ವದ 15 ಜನರ ತಂಡವು ಗೆಲುವು ಸಾಧಿಸಿದೆ.

ಮಂಜುನಾಥ್ ಗೌಡರ ತಂಡವು ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಗೆಲುವನ್ನು ಸಂಭ್ರಮಿಸಿ ಮಾತನಾಡಿದ ಮಂಜುನಾಥ್ ಗೌಡ, ನನ್ನ ಏಳಿಗೆಯನ್ನು ಸಹಿಸದ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು, ಆದರೂ ಕೂಡ ನಾಗಮಂಗಲ ತಾಲೂಕಿನ ಕೃಷಿಕ ಸಮಾಜದ ಸದಸ್ಯರು ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ನನಗೆ ಮತ್ತು ನನ್ನ ತಂಡಕ್ಕೆ ಪ್ರಚಂಡ ಗೆಲುವು ಸಾಧಿಸಲು ಸಹಕರಿಸಿದ್ದಾರೆ, ಎಲ್ಲರಿಗೂ ಕೂಡ ನನ್ನ ಧನ್ಯವಾದಗಳು ಅರ್ಪಿಸುವೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಧನ್ಯವಾದಗಳು ಅರ್ಪಿಸುವೆ ಎಂದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ