ಮದ್ದೂರು ತಾಲ್ಲೂಕು ಕ್ಯಾತಘಟ್ಟ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಿ.ಅಜಿತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಗಿರೀಶ್ ಅವರು ರಾಜಿನಾಮೆ ನೀಡಿದ್ದರರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗ ಅಜಿತ್ ಕುಮಾರ್ ಅವರನ್ನು ಹೊರತು ಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸುಧಾಕರ್ ತಿಳಿಸಿದರು.
ನೂತನ ಅಧ್ಯಕ್ಷ ಬಿ.ಅಜಿತ್ ಕುಮಾರ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ನಾನು ಇಂದು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಕ್ಯಾತಘಟ್ಟ ಗ್ರಾಮದ ರೈತರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಸಹಕಾರ ಸಂಘದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಬಿ.ಅಜಿತ್ ಕುಮಾರ್ ಅವರನ್ನು ಸಂಘದ ಸದಸ್ಯರು, ಗ್ರಾಮದ ಮುಖಂಡರು ಬುಧವಾರ ಸಂಜೆ 4 ಗಂಟೆಯಲ್ಲಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್, ರವೀಂದ್ರ, ಕೆಂಪೇಗೌಡ, ಉಪಾಧ್ಯಕ್ಷೆ ಎಂ.ಎಸ್.ಕಲ್ಪನಾ, ನಿದರ್ೇಶಕರಾದ ಕೆ.ಟಿ.ಗಿರೀಶ್, ದೇವೇಗೌಡ, ಡಿ.ವಿಜಯಕುಮಾರ್, ಕೆ.ಎಂ.ಪದ್ಮ, ತೊರೆಚಾಕನಹಳ್ಳಿ ಬಿ.ಉಮೇಶ್, ಸಿ.ಬಸವೇಗೌಡ, ಸಿದ್ದಶೆಟ್ಟಿ, ಕೆ.ಎಂ.ಲಿಂಗಯ್ಯ, ಕೆ.ಆರ್.ರೋಹಿತ್, ಸಿಇಓ ಕೆ.ಎಸ್.ಅಂದಾನಿಗೌಡ, ಎಂ.ಪ್ರಶಾಂತ್ ಸೇರಿದಂತೆ ಹಲವರಿದ್ದರು.




