Monday, November 23, 2026

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶ| ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ‘ಕಮಲ’ ಶಾಸಕರಿಗೆ ಆಫರ್ ನೀಡಿದ ಅಖಿಲೇಶ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯ ಭಿನ್ನಮತೀಯರಿಗೆ ಮಾನ್‌ಸೂನ್‌ ಅಫರ್‌ ನೀಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ನಡುವೆ ಭಿನ್ನಮತ ಉಂಟಾಗಿರುವ ಹಿನ್ನೆಲೆಯಲ್ಲಿ ಎಕ್ಸ್‌ ಮೂಲಕ ಅಖಿಲೇಶ್ ಯಾದವ್‌ ಬಿಜೆಪಿ ಭಿನ್ನರಿಗೆ ನೇರವಾಗಿ ಆಹ್ವಾನಿಸಿದ್ದಾರೆ.

ಮಾನ್‌ಸೂನ್‌ ಆಫರ್

ನೂರು ಮಂದಿಯನ್ನು ಕರೆದುಕೊಂಡು ಬನ್ನಿ, ಸರ್ಕಾರವನ್ನು ರಚಿಸಿ” ಎಂದು ಅಖಿಲೇಶ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಪಕ್ಷದ ಮುಖಂಡರ ನಡುವೆ ಮನಸ್ತಾಪವಾಗಿರುವ ಕಾರಣ ಅಖಿಲೇಶ್ ಯಾದವ್‌ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಒಟ್ಟು 80 ಸೀಟುಗಳ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 33 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಬಿಜೆಪಿಯ ಅಂತಃಕಲಹದಲ್ಲಿ ಜನರ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ ಎಂದು ರಾಜ್ಯ ರಾಜ್ಯಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್‌ ಹೇಳಿದ್ದರು.

“ಬಿಜೆಪಿ ಅಧಿಕಾರ, ಸರ್ಕಾರ ಹಾಗೂ ಆಡಳಿತಕ್ಕಾಗಿ ಕಿತ್ತಾಡುತ್ತಿದ್ದರೆ, ಉತ್ತರ ಪ್ರದೇಶದ ಜನರಿಗೆ ತೊಂದರೆಯಾಗುತ್ತದೆ. ಬಿಜೆಪಿ ಈ ಮೊದಲು ಇತರ ಪಕ್ಷಗಳನ್ನು ಹಾಳು ಮಾಡುತ್ತಿತ್ತು. ಆದರೆ ಈಗ ತನ್ನ ಪಕ್ಷದಲ್ಲಿಯೇ ಅದೇ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಾರೊಬ್ಬರು ಸಾರ್ವಜನಿಕರ ಬಗ್ಗೆ ಚಿಂತಿಸುತ್ತಿಲ್ಲ” ಎಂದು ಅಖಿಲೇಶ್ ಯಾದವ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಲಖನೌದಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಉತ್ತರ ಪ್ರದೇಶ ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಅವರು ಸರ್ಕಾರಕ್ಕಿಂತ ಪಕ್ಷ ದೊಡ್ಡದು ಎಂದು ಆದಿತ್ಯನಾಥ್ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಹೇಳಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ