Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅಂಬರೀಶ್ ಅಜಾತಶತ್ರುವಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ: ಬೇಲೂರು ಸೋಮಶೇಖರ್

ಅಂಬರೀಶ್  ಅವರು ಅಜಾತಶತ್ರುವಾಗಿ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ, ಅವರ ನೆನಪು ಸದಾ ನಮ್ಮ ಜೊತೆಯಲ್ಲಿರುತ್ತದೆ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ನಗರದ ಜೆ.ಸಿ.ವೃತ್ತದಲ್ಲಿ ದಿ. ಅಂಬರೀಶ್ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅಂಬರೀಶ್  ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆ ಕಂಡ ಅಪ್ರತಿಮ ನಾಯಕ ಅಂಬರೀಶ್,  ರಾಜ್ಯದ 7 ಕೋಟಿ ಕನ್ನಡಿಗರ ಮನಸ್ಸು ಗೆದ್ದು ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿ ರಾಜಕೀಯದಲ್ಲಿ ಹ್ಯಾಟ್ರಿಕ್ ಸಂಸದರಾಗಿ, ವಸತಿ ಸಚಿವರಾಗಿ ಯಾವುದೇ ರೀತಿಯ ಕಪ್ಪುಚುಕ್ಕೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಅಂಬರೀಶ್ ಅವರು ವಸತಿ ಖಾತೆ ಸಚಿವರಾಗಿ ಕೆಲಸ ಮಾಡಿದಾಗ ಕೇಂದ್ರ ಸರ್ಕಾರದಿಂದ ಅವರಿಗೆ ಉತ್ತಮ ಸಚಿವ ಎಂದು ಗೋಲ್ಡ್ ಮೆಡಲ್ ಬಂದಿತು ಎಂದರು.

ಅಂಬರೀಶ್ ಅವರ ಆರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಮಂಡ್ಯ ನಗರದ ಮಮತೆಯ ಮಡಿಲು ಮೂಲಕ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಕರಿಗೆ ಅನ್ನ ಸಂತರ್ಪಣೆ, ಗಣಂಗೂರು ಗೇಟ್ ಬಳಿ ಕುಸ್ತಿ ಪಂದ್ಯಾವಳಿ, ದೊಡ್ಡರಸಿನಕೆರೆಯಲ್ಲಿ ಪೂಜಾ ಕಾರ್ಯಕ್ರಮ ಸೇರಿದಂತೆ ಜಿಲ್ಲೆಯಾದ್ಯಂತ ಅಭಿಮಾನಿಗಳು ವಿವಿಧ ಸಮಾಜಮುಖಿ ಕಾರ್ಯಕ್ರಮ ನೆಡೆಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಮತೆಯ ಮಡಿಲು ಸಂಸ್ಥೆಯ ಮಂಗಲ ಎಂ.ಯೋಗೇಶ್, ಕೆ.ಪಿ.ಅರುಣ ಕುಮಾರಿ, ಅಂಬರೀಷ್ ಅಭಿಮಾನಿ ಹನಗನಹಳ್ಳಿ ರಾಜು, ಶ್ರೀಧರ್, ಹರೀಶ್ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ