Friday, November 20, 2026

ಪ್ರಾಯೋಗಿಕ ಆವೃತ್ತಿ

ನಗರಸಭೆ ಜಾಗ ಕೊಟ್ಟರೆ ಅಂಬರೀಶ್ ಕಂಚಿನ ಪುತ್ಥಳಿ ನಿರ್ಮಾಣ: ಬೇಲೂರು ಸೋಮಶೇಖರ್

ಮಂಡ್ಯ ನಗರಸಭೆಯಿಂದ ಜಾಗ ಕೊಟ್ಟರೆ ಮಂಡ್ಯದಲ್ಲಿ ಅಂಬರೀಶ್ ಕಂಚಿನ ಪುತ್ಥಳಿ
ನಿರ್ಮಿಸುತ್ತೇವೆ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ಮಂಡ್ಯದ ಸಂಜಯ ವೃತ್ತದಲ್ಲಿ ಭಾನುವಾರ ಅಖಿಲ ಕರ್ನಾಟಕ ನ್ಯಾಯ-ನೀತಿ-ಧರ್ಮ ಅಂಬಿ ಸೇನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ. ಎಂ.ಹೆಚ್.ಅಂಬರೀಷ್ ರವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಅನ್ನಸಂತರ್ಪಣೆ ಹಾಗೂ ಅಂಬರೀಷ್ ಗೀತ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೂರದ ಮಂಗಳೂರು, ಮೈಸೂರು,ಬೆಂಗಳೂರಿನಲ್ಲಿ ದಿವಂಗತ ಅಂಬರೀಶ್ ಅವರ ಪುತ್ಥಳಿಗಳು ಇವೆ. ಆದರೆ ಮಂಡ್ಯದ ಗಂಡು ಅಂಬರೀಶ್ ಅವರ ಪುತ್ಥಳಿ ಮಂಡ್ಯ ನಗರದಲ್ಲಿ ಆಗಬೇಕಾಗಿದೆ ಎಂದು ಹೇಳಿದರು.

ಅಂಬರೀಶ್ ಅವರು ಲಕ್ಷಾಂತರ ಅಭಿಮಾನಿ ಬಳಗ ಹುಟ್ಟು ಹಾಕಿದ್ದಾರೆ. ಅಂಬರೀಶ್ ಅವರು ಜಿಲ್ಲೆಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅಂಬರೀಶ್ ಅವರು ನಿಧನರಾಗಿ 2025 ನವೆಂಬರ್ 24ಕ್ಕೆ 7 ವರ್ಷಗಳು ಆಗುತ್ತಿವೆ.ಈ ಹಿನ್ನೆಲೆಯಲ್ಲಿ ನಗರಸಭೆ ಜಾಗ ಕೊಟ್ಟರೆ ಮಂಡ್ಯದಲ್ಲೂ ಅಂಬರೀಶ್ ಪುತ್ಥಳಿಯನ್ನು ಅಂಬರೀಶ್ ಅಭಿಮಾನಿಗಳ ನೆರವಿನಿಂದ ನಿರ್ಮಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮನ್ ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಯು‌.ಸಿ.ಶಿವಕುಮಾರ್ ಮಾತನಾಡಿ, ಮಂಡ್ಯಕ್ಕೆ ಅಂಬರೀಶ್ ಅವರು ಕಳಸ ಪ್ರಾಯ ರಾಗಿದ್ದರು.ಅಂಬರೀಶ್ ಅವರು ಒಂದು ಶಕ್ತಿಯಾಗಿ ಬೆಳೆದಿದ್ದರು.ಅವರ ಜೀವನ-ಸಾಧನೆ ಅನನ್ಯ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ನಾಗೇಶ್ ಮಾತನಾಡಿ,ಅಂಬರೀಶ್ ಅವರಿಗೆ ಯಾರು ವಿರೋಧಿಗಳಿರಲಿಲ್ಲ. ಎಲ್ಲಾ ಪಕ್ಷದಲ್ಲೂ ಅವರಿಗೆ ಮಿತ್ರರಿದ್ದರು ಎಂದು ಹೇಳಿದರು.

ಅಂಬರೀಶ್ ಅಭಿಮಾನಿಗಳು ಕೂಡಲೇ ಮಂಡ್ಯದಲ್ಲಿ ಅಂಬರೀಶ್ ಪುತ್ಥಳಿ ಮಾಡಲು ಸ್ಥಳ ಗುರುತಿಸಿ ಮನವಿ ಪತ್ರ ಕೊಡಲಿ, ಮಂಡ್ಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಮಂಡ್ಯ ಶಾಸಕರೊಡಗೂಡಿ ಮಂಡ್ಯ ನಗರ ಸಭೆಯ 35 ನಗರಸಭೆ ಸದಸ್ಯರು ಸೇರಿ ಒಕ್ಕೊರಲಿನಿಂದ ಜಾಗ ಕೊಡಿಸುತ್ತೇವೆ ಎಂದರು.

ಅಖಿಲ ಕರ್ನಾಟಕ ನ್ಯಾಯ,ನೀತಿ, ಧರ್ಮ ಅಂಬಿ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಗೌಡ,ಉಪಾಧ್ಯಕ್ಷ ಸಿದ್ದೇಗೌಡ,ಕಾಚೊಹಳ್ಳಿ ನಂಜೇಗೌಡ, ರಾಜು ಹನಗನಹಳ್ಳಿ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ