ದಾನ ಎನ್ನುವುದು ಮನುಷ್ಯನೊಬ್ಬ ತನ್ನ ಹಿಡಿತದಿಂದಲೇ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ!
ಅಕ್ಷರ ದಾಸೋಹ ಹಾಗೂ ಅನ್ನ ದಾಸೋಹಗಳು ಮಾತ್ರ ಬಹಿರಂಗ ಸಂತೋಷಕ್ಕಿಂತ ಆತ್ಮಸುದ್ದಿ ಮಾಡಬಲ್ಲವು ಜೊತೆಗೆ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲವು!
ಈ ಮೇಲಿನ ಮಾತುಗಳನ್ನು ನೆನಪಿಕೊಳ್ಳಲು ಕಾರಣ…..
ಅಂದು ಎಂದರೆ 60- 70 ರ ದಶಕದಲ್ಲಿ ನಮ್ಮೂರಿನ ಮಕ್ಕಳೆಲ್ಲಾ ಚನ್ನಾಗಿ ಓದಬೇಕು ಎಂಬ ಹಂಬಲದೊಂದಿಗೆ ವಾರಕ್ಕೊಮ್ಮೆ ಊರಿಗೆ ಆಗಮಿಸಿ ಓದುವ ಮಕ್ಕಳನ್ನು ಉರಿದುಂಬಿಸುತ್ತಿದ್ದ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಕೆಇಬಿ ಇಂಜಿನಿಯರ್ ಆಗಿದ್ದ ನಮ್ಮೂರಿನ ದಿವಂಗತ ಪುಟ್ಟೇಗೌಡರು !
ಆದರೇನು ಮಾಡೋದು ಒಳ್ಳೆಯವರಿಗೆ ಕಾಲಯಿಲ್ಲೋ ಮಾರಾಯ ಅನ್ನೋರೀತಿಯಲ್ಲಿಯೇ 1976 ರಲ್ಲಿ ದುದ್ದ ಹತ್ತಿರ ಖಾಸಗಿ ಬಸ್ ವಿ.ಸಿ. ಕಾಲವೆ ಬಿದ್ದು ನೂರು ಮಂದಿ ಬಲಿಯಾದವರಲ್ಲಿ ಇವರು ಒಬ್ಬರಾಗಿಯೇ ಬಿಟ್ಟರು!
ಆದರೂ ಸಹ ವ್ಯಕ್ತಿ ಸತ್ತರೂ ಸಹ ಅವರ ಜೀನ್ ಸಾಯದು ಅನ್ನೋರೀತಿ…….
ಇಂದು ಅಂದರೆ ಈ ದಿನ ಈಗಿರುವ ನಮ್ಮೂರಿನ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲು ಸಾದ್ಯವಿಲ್ಲ. ಹೀಗಾಗಿ ದುರಸ್ತಿ ಸಹವಾಸವೇ ಬೇಡ! ಆದರೆ ಅದೇ ಜಾಗದಲ್ಲಿಯೇ ಎರಡು ಅಂತಸ್ತುಗಳ 6 ಕೊಠಡಿಗಳನ್ನು ನಾನು ನನ್ನ ತಂದೆ- ತಾಯಿಯ ಹೆಸರಿನಲ್ಲಿ ನಿರ್ಮಿಸಿ ಕೊಡುತ್ತೇನೆ. ಈ ಮೂಲಕ ನಮ್ಮೂರ ಮಕ್ಕಳ ಆಧುನಿಕ ಕಲಿಕೆಗೆ ಮುನ್ನಡಿ ಬರೆಯೋಣ ಎಂದು ಹೇಳಿ ಈ ದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡವರು ಮತ್ತಾರು ಅಲ್ಲ! ಅದೇ ದಿವಂಗತ ಪುಟ್ಟೇಗೌಡರ ಹಿರಿಯ ಸುಪುತ್ರ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕೆ.ಪಿ.ಶಿವಕುಮಾರ್ ( ಶಿವಣ್ಣ) ರವರು.
ನಿಮಗೆ ಗಾಬರಿಯಾಗುತ್ತಿದ್ದರೂ ಇದು ಅಕ್ಷರಶಃ ಸತ್ಯ!
ಇಂದು ದಿವಂಗತ ಲೇಟ್ ಪುಟ್ಟೇಗೌಡರ ಹಿರಿಯ ಮಗ ಕೆ.ಪಿ. ಶಿವಕುಮಾರ್ ಅವರ ಅಮ್ಮ ಶ್ರೀಮತಿ ಜಯಮ್ಮನವರೊಂದಿಗೆ ಮಂಡ್ಯ ಡಿಡಿಪಿಐ ಕಚೇರಿಗೆ ಆಗಮಿಸಿ ತನ್ನ ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂದಾಜು ಮೊತ್ತ 50 ಲಕ್ಷಗಳಲ್ಲಿ ಎರಡು ಅಂತಸ್ತುಗಳ ಆರು ಕೊಠಡಿಗಳನ್ನು ತಮ್ಮ ಕುಟುಂಬದ ವತಿಯಿಂದ ನಿರ್ಮಿಸಿಕೊಡುವ ಒಡಂಬಡಿಕೆಗೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಪಿಐ ಜವರೇಗೌಡರು ಇಡೀ ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿಯೇ ಒಂದು ಕುಟುಂಬ 50 ಲಕ್ಷ ರೂಗಳಲ್ಲಿ ಆರು ಕೊಠಡಿಗಳನ್ನು ನಿರ್ಮಿಸಿಕೊಡುತ್ತಿರುವುದು ಇದೇ ಮೊದಲು ಎಂದು ತಿಳಿಸಿ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ನಮ್ಮ ಇಲಾಖೆ ಮರೆಯಲಾಗದು ಎಂದರು.
ನಂತರ ಮಾತನಾಡಿದ ಕೃಷ್ಣರಾಜಪೇಟೆ ಬಿಇಓ ಸೀತರಾಮುರವರು ಈ ಕುಟುಂಬ ತನ್ನ ಯಶಸ್ಸನ್ನು ಮಾತ್ರ ಅನುಭವಿಸದೆ ತನ್ನ ಹುಟ್ಟೂರಿನ ಗ್ರಾಮವನ್ನು ಮರೆಯದೇ ಇಷ್ಟೊಂದು ಮೊತ್ತವನ್ನು ವೆಚ್ಚ ಮಾಡಿ ಮಕ್ಕಳ ಆಧುನಿಕ ಕಲಿಕೆ ಅನುವು ಮಾಡಿಕೊಡುತ್ತಿರುವ ಕುಟುಂಬಕ್ಕೆ ಇಲಾಖೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು!
ಕತ್ತರಘಟ್ಟ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೆ.ಜೆ.ಜಗದೀಶ್, ಮುಖ್ಯ ಶಿಕ್ಷಕಿ ಬೆಟ್ಟಮ್ಮ, ಗ್ರಾಮ ಪಂಚಾಯಿತಿ ಸದಸ್ಯಣಿ ವಿಜಯಮ್ಮ ಮತ್ತು ಉಪನ್ಯಾಸಕರುಗಳಾದ ಕತ್ತರಘಟ್ಟ ವಾಸು, ಶಫಿ ರವರುಗಳು ಹಾಜರಿದ್ದರು!




