Thursday, November 19, 2026

ಪ್ರಾಯೋಗಿಕ ಆವೃತ್ತಿ

ಕ್ರೈಸ್ತರ ನಿಗಮಕ್ಕೆ ಮೂಲನಿವಾಸಿ ಕನ್ನಡಿಗರನ್ನೇ ಆಯ್ಕೆ ಮಾಡಿ : ಆಂಡ್ರೂ ಜಾನ್

ರಾಜ್ಯ ಸರ್ಕಾರ ಕ್ರೈಸ್ತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಮೂಲನಿವಾಸಿ ಕನ್ನಡಿಗ ಕ್ರೈಸ್ತರನ್ನೇ ಆಯ್ಕೆ ಮಾಡಬೇಕೆಂದು ಸಾಡೇ ದೇವಾಲಯದ ಸಭಾಪಾಲಕ ರೆ.ಆಂಡ್ರೂ ಜಾನ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ನಿಗಮ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಅದರಂತೆ ಸಮುದಾಯದ ಅಭಿವೃದ್ಧಿಗಾಗಿ 100 ಕೋಟಿ ರೂ ಅನುದಾನ ಕಾದಿರಿಸುವ ಮೂಲಕ ಬಹುದಿನದ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಪ್ರಮುಖವಾಗಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸುವಾಗ ಮೂಲ ಕನ್ನಡಿಗರಿಗೆ ಆದ್ಯತೆ ಕೊಡಬೇಕು. ಅದರಲ್ಲಿಯೂ ಅವಕಾಶ ವಂಚಿತ ಕನ್ನಡ ಕ್ರೈಸ್ತರಿಗೆ ಮನ್ನಣೆ ನೀಡಬೇಕು. ಇದರೊಂದಿಗೆ ಸಮುದಾಯದ ಅಭಿವೃದ್ಧಿಗೆ ಪೂರಕ ಸ್ಪಂದನೆಯನ್ನು ಸರ್ಕಾರ ನೀಡಬೇಕೆಂದು ಮನವಿ ಮಾಡಿದರು.

ನಿವೃತ್ತ ತಹಸೀಲ್ದಾರ್ ಸನ್ನುತ, ಜಿಲ್ಲಾ ಕ್ರೈಸ್ತ ಪ್ರಗತಿಪರ ಸಂಸ್ಥೆ ಅಧ್ಯಕ್ಷ ರಾಮಣ್ಣ ಜೋಸೆಫ್, ಕದಂಬ ಸೈನ್ಯದ ಅಧ್ಯಕ್ಷ ಬೇಕ್ರಿ ರಮೇಶ್, ಎಸ್.ಸಂತೋಷ್, ಪುಟ್ಟರಾಜು, ವೈ.ಥಾಮಸ್ ಬೆಂಜಮಿನ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ