ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಅಶ್ವಿನಿಆನಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಚುನಾವಣೆಗೆ ಅಶ್ವಿನಿ ಆನಂದ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿ ಇಓ ರಾಮಲಿಂಗಯ್ಯ ಅವರು ಅಶ್ವಿನಿಆನಂದ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆಂದು ಪ್ರಕಟಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಅಶ್ವಿನಿಆನಂದ್ ಅವರನ್ನು ಸದಸ್ಯರು ಮತ್ತು ಮುಖಂಡರು ಅಭಿನಂದಿಸಿ ಸಿಹಿ ತಿನಿಸಿ ಸಂಭ್ರಮಿಸಿದರು.
ನಂತರ ನೂತನ ಅಧ್ಯಕ್ಷೆ ಅಶ್ವಿನಿಆನಂದ್ ಮಾತನಾಡಿ, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಿದ ಸದಸ್ಯರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನನ್ನ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಟಿ.ಶಂಕರ್, ಯೋಗೇಂದ್ರ, ಚನ್ನಶೆಟ್ಟಿ, ಸುಂದರ್, ವಿನುಕುಮಾರ್, ಚಿಕ್ಕಸಿದ್ದಯ್ಯ, ದೇವರಾಜು, ಮಹದೇವು, ವಿಜಿ, ಸುಂದರ್, ಸುರೇಶ್, ಅಭಿಷೇಕ್, ಮಂಜುನಾಥ್, ಆನಂದ್, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಸಿದ್ದೇಗೌಡ ಚಂದ್ರಶೇಖರ್, ತ್ರಿಸೂಲ್, ಅಕ್ಕಿಸ್ವಾಮಿ, ಮಂಜುನಾಥ್, ಮಹೇಶ್, ರವಿ, ನಾಗಮಣಿ, ಶಿವಮ್ಮ, ಅನಿತಾ, ಅಭಿಲಾಷ ಹಾಗೂ ಭಾಗ್ಯಮ್ಮ ಸೇರಿದಂತೆ ಹಲವರಿದ್ದರು.




