Saturday, November 21, 2026

ಪ್ರಾಯೋಗಿಕ ಆವೃತ್ತಿ

ಅಪೆಕ್ಸ್ ಬ್ಯಾಂಕ್ ಅನುದಾನ ಬಳಸಿ ಉತ್ತಮ ಅಭಿವೃದ್ಧಿ ಕಾರ್ಯ:ಅಶ್ವಥ್ ಹರ್ಷ

ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಅನುದಾನ ಬಳಸಿಕೊಂಡು ಉತ್ತಮವಾಗಿ ಅಭಿವೃದ್ಧಿ ಕಾರ್ಯ ಮಾಡಿರುವುದು ಸಂತಸ ತಂದಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಅಮರಾವತಿ ಅಶ್ವಥ್ ಹರ್ಷ ವ್ಯಕ್ತಪಡಿಸಿದರು.

ಮಂಡ್ಯ ನಗರದ ಹೊಸಹಳ್ಳಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಮಂಡ್ಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಂಪೌಂಡ್ ಮತ್ತು ಉಗ್ರಾಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಗ್ರಾಣ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ನೀಡಿದ ಅನುದಾನವನ್ನು ಸಮಗ್ರವಾಗಿ ಬಳಸಿ ಉತ್ತಮ ಕಾಮಗಾರಿ ಮಾಡಿ ಮಾದರಿಯನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದರು.

ಇಷ್ಟೊಂದು ಉತ್ತಮವಾಗಿ ಅಭಿವೃದ್ಧಿ ಮಾಡುತ್ತೀರಿ ಎಂದು ನಾನು ಭಾವಿಸಿರಲಿಲ್ಲ.ಸಂಘದ ಕಾರ್ಯಚಟುವಟಿಕೆ ನೋಡಿ ತುಂಬಾ ಖುಷಿಯಾಗುತ್ತಿದೆ.

ನಗರವಾಪ್ತಿಯಲ್ಲಿದ್ದುಕೊಂಡು ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ದಿ ಕಾಳಜಿ ವಹಿಸಿರುವುದು ಉತ್ತಮ ಬೆಳೆವಣಿಗೆ. ಇದೇ ಮಾದರಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಬೆಳೆಯಲಿ, ಅಕ್ಕ ಪಕ್ಕದ ಮತ್ತು ಗ್ರಾಮಗಳಲ್ಲಿನ ಸಂಘಗಳು ಬಂದು ಅಭಿವೃದ್ಧಿ ವೀಕ್ಷಿಸಲಿ ಎಂದರು.

ಈ ಸಂಘದಿಂದ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹೆಚ್ಚು ಹೆಚ್ಚು ನೀಡಿ, ಸ್ತ್ರೀ ಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ತುಂಬಾ ಉಪಯೋಗವಿದೆ, ಸಾಲದ ರೂಪದಲ್ಲಿ ಸಂಘಗಳು ಪಡೆದು ಶೂನ್ಯಬಡ್ಡಿ ದರದಲ್ಲಿ ಸಾಲ ನೀಡಬಹದು.

ಈ ಬಗ್ಗೆ ಅಧ್ಯಕ್ಷರು, ಸಿಇಓಗಳು ಮತ್ತು ನಿರ್ದೇಶಕರು ಕಾಳಜಿ ವಹಿಸಲಿ, ಉದ್ಯಮಶೀಲರನ್ನಾಗಿ ಮಾಡುವಲ್ಲಿ ಕಾರ್ಯಸಾಧಿಸಿ ಎಂದರು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಟಿ. ಶೇಖರ್, ಕಸಭಾ ಸೊಸೈಟಿ ಅಧ್ಯಕ್ಷ ಎನ್. ನಾಗರಾಜು, ಉಪಾಧ್ಯಕ್ಷೆ ಮಂಗಳಾಗೌರಿ, ನಿರ್ದೇಶಕರಾದ ಬೋರೇಗೌಡ, ಬೋರಯ್ಯ, ಬಿ.ಬೋರೇಗೌಡ, ಕೆ.ಸಿ.ರವೀಂದ್ರ, ಶ್ರೀಧರ್, ಶೋಭಾ, ಮೋಹನ್, ಟಿ.ರಾಜು, ಪುಟ್ಟಸ್ವಾಮಿ, ಬೊಮ್ಮೇಗೌಡ, ಸಿಇಓ ಜಯರಾಂ, ಮಾಜಿ ಅಧ್ಯಕ್ಷರು ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ