ರಾಜ್ಯ ಸರ್ಕಾರ ರೈತರಿಗೆ ಬರಪರಿಹಾರ ಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಪದಾಧಿಕಾರಿಗಳು ಶ್ರೀರಂಗಪಟ್ಟಣ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಬೆಳೆದು ನಿಂತ ಬೆಳೆಗಳ ರಕ್ಷಣೆಗೆ ಕೆಆರ್’ಎಸ್ ಕನ್ನಂಬಾಡಿ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡದೆ, ಬೆಳೆ ಒಣಗಳು ಕಾರಣ ವಾಗಿದೆ. ಜೊತೆಗೆ ರೈತರ ನೆರವಿಗೆ ಬರಲು ವಿಫಲ ವಾಗಿದ್ದು, ರೈತ ವಿರೋಧಿ ರಾಜ್ಯ ಸರ್ಕಾರ ಒಣಗಿದ ಬೆಳೆ ಸಮೀಕ್ಷೆ ಮಾಡದೆ, ನೊಂದ ರೈತರಿಗೆ ಅನ್ಯಾಯ ಮಾಡಿದೆ.
ತಾಲ್ಲೂಕಿನ ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ನೀಡಿ, ಅನ್ನದಾತರ ನೋವನ್ನು ಸರ್ಕಾರಕ್ಕೆ ವರದಿ ಮಾಡಲು ಶ್ರೀರಂಗಪಟ್ಟಣದ ತಾಸಿಲ್ದಾರ್ ರವನ್ನು ಬೇಟಿ ಮಾಡಿ ಒತ್ತಾಯಿಸುತ್ತಿರುವುದಾಗಿ ಅವರು ತಿಳಿಸಿದರು.




