ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಗಂಧದಗುಡಿ ಅಪ್ಪು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇತ್ತಿಚೇಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗಂಧನಗುಡಿ ಪ್ರೀ-ರಿಲೀಸ್ ಇವೆಂಟ್ಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದರು. ಈ ಮೂಲಕ ಈ ಸಾಕ್ಷ್ಯಚಿತ್ರದ ಬಗ್ಗೆ ಎಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂಬುದನ್ನು ಸಾಬೀತುಪಡಿಸಿದ್ದರು.
‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅಪ್ಪು ಕಂಡ ದೊಡ್ಡ ಕನಸು. ಅವರನ ಪುಣ್ಯತಿಥಿಗೆ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಹಲವು ತಿಂಗಳಿಂದ ಕಾದಿದ್ದಾರೆ. ಪುನೀತ್ ಅವರನ್ನು ದೊಡ್ಡ ಪರದೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಇದು ಕೊನೆಯ ಅವಕಾಶ. ಈ ಕಾರಣದಿಂದ ಫ್ಯಾನ್ಸ್ ಈ ಸಾಕ್ಷ್ಯಚಿತ್ರಕ್ಕಾಗಿ ಕಾದಿದ್ದಾರೆ. ಈಗ ‘ಗಂಧದ ಗುಡಿ’ಗೆ ಆನ್ಲೈನ್ನಲ್ಲಿ ಪ್ರೀ ಬುಕಿಂಗ್ ಆರಂಭ ಆಗಿದೆ.
ಅ.28ರ ಶುಕ್ರವಾರ ‘ಗಂಧದ ಗುಡಿ’ ರಿಲೀಸ್ ಆಗುತ್ತಿದೆ. ಈ ಸಾಕ್ಷ್ಯ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಬುಕ್ ಮೈ ಶೋ’ನಲ್ಲಿ ‘ಗಂಧದ ಗುಡಿ’ಗೆ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಈ ಸಾಕ್ಷ್ಯಚಿತ್ರದ ಅವಧಿ ಕೇವಲ 1 ಗಂಟೆ 37 ನಿಮಿಷ ಇದೆ. ಹೀಗಾಗಿ, ಹಲವು ಚಿತ್ರಮಂದಿರಗಳಲ್ಲಿ ಐದು ಶೋ ಇಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು ಪ್ರಮಾಣಪತ್ರ ಸಿಕ್ಕಿದೆ. ಕರ್ನಾಟಕಕ್ಕೆ ಗಂಧದ ಗುಡಿ ಎಂದು ಕರೆಯಲಾಗುತ್ತದೆ. ಇಲ್ಲಿ ಅಪಾರ ಸಸ್ಯ ಹಾಗೂ ಪ್ರಾಣಿ ಸಂಪತ್ತು ಇದೆ. ಅನೇಕ ಅಚ್ಚರಿಗಳು ಕಾಡಿನಲ್ಲಿ ಇವೆ. ಇದನ್ನು ಜನರ ಮುಂದಿಡುವ ಬಗ್ಗೆ ಪುನೀತ್ ಕನಸು ಕಂಡಿದ್ದರು. ಅದರ ಪ್ರತಿಫಲವೇ ‘ಗಂಧದ ಗುಡಿ’. ಇದರಲ್ಲಿ ಪುನೀತ್ ಅವರದ್ದೇ ಧ್ವನಿ ಇರಲಿದೆ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಈ ಡಾಕ್ಯುಮೆಂಟರಿ ಅನ್ನು ರಿಲೀಸ್ ಮಾಡುತ್ತಿದ್ದಾರೆ. ‘ಗಂಧದ ಗುಡಿ’ಯನ್ನು ನೋಡಿ ಅಭಿಮಾನಿಗಳು ಚಿತ್ರಮಂದಿರದಲ್ಲಿ ಭಾವುಕರಾಗೋದಷ್ಟೆ ಬಾಕಿ.




