Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹಲ್ಲೆ ; ಮೂವರ ಮೇಲೆ ಎಫ್ಐಆರ್ ದಾಖಲು

ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದ ಕಳೆದ ಜ.27ರಂದು ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ.

ಅನ್ನಪೂರ್ಣ ಎಂಬ ಮಹಿಳೆ ದೂರು ದಾಖಲಿಸಿದ್ದು, ತನ್ನ ಗಂಡ ಬಸವರಾಜ ಅವರ ಮೇಲೆ ಮಹದೇವು, ಸಿದ್ದೇಗೌಡ ಹಾಗೂ ಮಾಲಾಶ್ರೀ ಎಂಬುವವರು ಹಲ್ಲೆ ನಡೆಸಿ, ಗಾಯಗೊಳಿಸಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಈ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) 2023 (U/s-126(2),352, 115(2), 118(1),3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ದೂರಿನ ಸಾರಾಂಶ

ಹಳೇ ವ್ಯಾಜ್ಯದಲಿರುವ ಖಾಲಿ ನಿವೇಶನದ ವಿಚಾರವಾಗಿ ಹಾಗಾಗೆ ನಮ್ಮ ಚಿಕ್ಕ ಮಾವನಾದ ವೈದ್ಯರಾದ ಡಾ. ಚಂದ್ರೇಗೌಡ ಮತ್ತು ನಮ್ಮಗಳ ಮಧ್ಯೆ ವಾಗ್ವಾದಗಳು ಮತ್ತು ಗಲಾಟೆಗಳು ನಡೆಯುತ್ತಿದ್ದು, ನಿವೇಶನದ ಪಕ್ಕದಲ್ಲಿ ವಾಸವಿರುವ ಮಹದೇವು ಬಿನ್ ಮೋಟೇಗೌಡ ಮತ್ತು ಕುಮಾರಿ ಕೋಂ ಮಂಚೇಗೌಡ ಇವರು ಸಹ ನಮ್ಮ ನಿವೇಶನವನ್ನು ಅಕ್ರಮಿಸಿಕೊಂಡು ಚಪ್ಪರ ಹಾಕಿಕೊಂಡು ಇವರ ಮಧ್ಯೆ ವಾಗ್ವಾದಗಳು ಮತ್ತು ಗಲಾಟೆಗಳು ನಡೆಯುತ್ತಿದೆ ಎಂದು ಅನ್ನಪೂರ್ಣ ಎಂಬ ಮಹಿಳೆ ದೂರಿನಲ್ಲಿ ತಿಳಿಸಿದ್ಧಾರೆ.

ಸರಿ ಸುಮಾರು 10 ವರ್ಷಗಳಿಂದಲೂ ಇದೇ ವಿಚಾರವಾಗಿ ಗಲಾಟೆಗಳು ನಡೆಯುತ್ತಿದೆ, ಕಳೆದ 29-01-2025 ರಂದು ಬುಧವಾರ ಸಮಯ ಸುಮಾರು 12-30ರ ವೇಳೆ ಮಹದೇವು ಬಿನ್ ಮೋಟೇಗೌಡ ಎಂಬ 65 ವರ್ಷದ ವ್ಯಕ್ತಿಯು ಖಾಲಿ ನಿವೇಶನದಲ್ಲಿ ಮೂತ್ರ ವಿಸರ್ಜನೆಯನ್ನು ಬಹಿರಂಗವಾಗಿ ಮಾಡುತ್ತಿದ್ದಾಗ ಇದನ್ನು ಕಂಡು ನನ್ನ ಗಂಡ ಕೇಳಿದಾಗ ನನ್ನ ಗಂಡನ ಮೇಲೆ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಹದೇವು ಅವರ ಅಳಿಯ ಸಿದ್ದೇಗೌಡ ಬಿನ್ ಬಸವೇಗೌಡ (40 ವರ್ಷ) ಹಾಗೂ ಹೆಂಡತಿ ಮಾಲಾಶ್ರೀ (34) ಅವರುಗಳು ಬಂದು, ನನ್ನ ಗಂಡನನ್ನು ನಿಂದಿಸಿ, ಬೈದು ಕೊರಳು ಪಟ್ಟಿಯನ್ನು ಹಿಡಿದುಕೊಂದು ಬೈದು ಎಳೆದಾಡುವ ಸಂದರ್ಭದಲ್ಲಿ ಮಹದೇವು ಎಂಬಾತ ಹಿಂದಿನಿಂದ ಬಂದು ಚಪ್ಪರದಿಂದ ಒಂದು ಮರದ ದಡಿಯನ್ನು ಮುರಿದು ನನ್ನ ಗಂಡನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದನು. ಇದರಿಂದ ನನ್ನ ಗಂಡನ ತಲೆ ಸೀಳಿ ತೀವ್ರ ರಕ್ತಸ್ರಾವವಾಗಿ ಅಪಾರ ರಕ್ತವು ಹರಿದುಹೋಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದರು, ನಂತರ ಜನರು ಕೂಡಲೇ ಬಂದು ನನ್ನ ಗಂಡನನ್ನು ಆಸ್ಪತ್ರೆಗೆ ದಾಖಲಿಸಿದರು, ಈಗ ನನ್ನ ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ