Tuesday, November 24, 2026

ಪ್ರಾಯೋಗಿಕ ಆವೃತ್ತಿ

ಆಗಸ್ಟ್ 7 ರಂದು ‘ಜೀವನಾಡಿ’ ಮಾಸ ಪತ್ರಿಕೆ ಬಿಡುಗಡೆ

ಪಾಪು ಸೇವಾ ಟ್ರಸ್ಟ್ ಹೊರತರುತ್ತಿರುವ ‘ಜೀವನಾಡಿ’ ಕನ್ನಡ ಮಾಸ ಪತ್ರಿಕೆ ಬಿಡುಗಡೆ ಸಮಾರಂಭ ಆ.7ರಂದು ಬೆಳಿಗ್ಗೆ 10.30ಕ್ಕೆ ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆಯಲಿದೆ ಎಂದು ಪತ್ರಿಕೆ ಸಂಪಾದಕ ಡಾ.ಎಚ್.ಎಸ್.ಮುದ್ದೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಉದ್ಘಾಟನೆ ಮತ್ತು ಪತ್ರಿಕೆ ಬಿಡುಗಡೆ ಮಾಡುವರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜು ಅಧ್ಯಕ್ಷತೆ ವಹಿಸುವರು.

ಖ್ಯಾತ ವಾಗ್ಮಿ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಶಿವಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಭಾಗವಹಿಸಲಿದ್ದಾರೆ ಎಂದರು.

ಜೀವನಾಡಿ ಪತ್ರಿಕೆಯು 64 ಪುಟಗಳ ಮಾಸಿಕ ಪತ್ರಿಕೆಯಾಗಿದ್ದು ಸುಧಾ, ತರಂಗ ಪತ್ರಿಕೆಗಳ ಮಾದರಿಯಲ್ಲಿರುತ್ತದೆ. ಕನ್ನಡ ನಾಡಿನ ಹಲವು ಗಣ್ಯರು ಪತ್ರಿಕೆಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಈ ನಾಡಿನ ಸಂಸ್ಕೃತಿ, ನೆಲ, ಜಲ, ಭಾಷೆ, ಆಚಾರ, ವಿಚಾರ, ಸಂಪ್ರದಾಯ, ಜಾನಪದ, ಆಧ್ಯಾತ್ಮ ಕುರಿತಂತೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬರಲಿದೆ ಎಂದರು.

ನಾಡಿನ ಹಲವು ಸುಪ್ರಸಿದ್ಧ ದೊಡ್ಡ ಲೇಖಕರು ಹಾಗೂ ಉದಯೋನ್ಮುಖ ಲೇಖಕರು ಪತ್ರಿಕೆಗೆ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ನಾಡಿನಲ್ಲಿ ನಿತ್ಯ ಹೊಸ ಪತ್ರಿಕೆಗಳು ಆರಂಭಗೊಳ್ಳುತ್ತಿದ್ದು ಓದುಗರ ಸಂಖ್ಯೆ ಕಡಿಮೆಯಾಗಿಲ್ಲ.ಪ್ರಪಂಚದ ನಾನಾ ವಿಚಾರಗಳನ್ನು ಪತ್ರಿಕೆಗಳ ಮೂಲಕ ತಲುಪಿಸುವ ಗುರಿಯನ್ನು ಜೀವನಾಡಿ ತಂಡ ಹೊಂದಿದೆ ಎಂದರು.

ಗೋಷ್ಠಿಯಲ್ಲಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ರವಿ ಮುದ್ದೇಗೌಡ, ಸಾಹಿತಿ ಎಸ್.ಶ್ರೀನಿವಾಸಶೆಟ್ಟಿ, ಉದ್ಯಮಿ ಡಾ. ಜಗನ್ನಾಥಶೆಟ್ಟಿ, ಲೋಕೇಶ್ ಚಂದಗಾಲು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ