ಶಿವಸುಂದರ್
ಕನ್ನಡ ಸಂಸ್ಕೃತಿಯ ಕಂಟಕಗಳಲ್ಲಿ ಪ್ರಮುಖವಾಗಿರುವ ಬ್ರಾಹ್ಮಣಶಾಹಿ ಸಂಸ್ಕೃತಿಯ ಮೇಲಾಧಿಪತ್ಯದ ವಿರುದ್ಧ..
ಈವರೆಗಿನ ಸಮ್ಮೇಳನಗಳ
ಭಾಷಣಗಳು -ನಿರ್ಣಯಗಳು ತೋರಲಾಗದ ಪರಿಣಾಮಕಾರಿ ಪ್ರತಿರೋಧವನ್ನು…
ಸಾಂಕೇತಿಕವಾಗಿಯೇ ಆದರೂ
ಮಂಡ್ಯದ ಬಾಡೂಟ ಹೋರಾಟ ತೋರಿದೆ….
ಈ ಹೋರಾಟ ಸಮ್ಮೇಳನದ ರೂಢಿಗತ ನಡವಳಿಗಳಿಗೆ ಯಾವ ಅಡ್ಡಿಯನ್ನು ಮಾಡುತ್ತಿಲ್ಲ..
ಬದಲಿಗೆ ಜಡವಾಗುತ್ತಿದ್ದ ಕನ್ನಡ ಜಾತ್ರೆಗೆ ಹೊಸ ಜನಪರ ಸವಾಲೊಡ್ಡಿ ಅರ್ಥಪೂರ್ಣವಾಗುವ ಅವಕಾಶ ನೀಡಿದೆ…
ಆದ್ದರಿಂದ ನಾಡಿಗರಿಂದ ನಾಡೋಜರವರೆಗೆ ಈ ಹೋರಾಟವನ್ನು ಬೆಂಬಲಿಸಬೇಕು…
ಅದರ ಜೊತೆಗೆ
ಬಾಡೂಟದ ಹೋರಾಟವು ಬಹುಜನ ಕನ್ನಡ ಬದುಕು ಬವಣೆ ಮತ್ತು ಸಂಸ್ಕೃತಿಗಳ ಪರ್ಯಾಯ ವೇದಿಕೆಯಾಗಿ ವಿಸ್ತರಿಸಿಕೊಳ್ಳಬೇಕು…




