Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರದಲ್ಲಿ ಯುಗಾದಿಗೆ ಜೂಜಾಟ ನಿಷೇಧ

ಯುಗಾದಿ ಹಬ್ಬದ ಪ್ರಯುಕ್ತ ಎಲ್ಲಂದ್ರಲ್ಲಿ ಬಹಿರಂಗವಾಗಿ ಜೂಜಾಟ ಆಡುವುದು ಸಹಜ, ಆದರೆ ಈ ಯುಗಾದಿ ಹಬ್ಬಕ್ಕೆ ಪಾಂಡವಪುರದಲ್ಲಿ ಜೂಜಾಟ ಆಡುವುದಕ್ಕೆ ಅವಕಾಶವಿಲ್ಲ.  ಇದು ಕಾನೂನು‌ ಬಾಹಿರವಾಗುತ್ತದೆ ಎಂದು ಪೊಲೀಸರು ಪಾಂಡವಪುರದಲ್ಲಿ ಪ್ರಚಾರ ನಡೆಸಿ, ಎಚ್ಚರಿಸಿದ್ದಾರೆ.

ಯುಗಾದಿ ಹಬ್ಬದ ನೆಪದಲ್ಲಿ ಯುವಜನತೆ ಹಾಗೂ ಜನರು ನಿರ್ಜನ ಪ್ರದೇಶ, ಅರಳಿಕಟ್ಟೆ, ಮರದ ಕೆಳಗೆ, ನಾಲೆ ಏರಿ ಮೇಲೆ ಗುಂಪು ಕಟ್ಟಿಕೊಂಡು ಇಸ್ಪೀಟ್ ಎಲೆ ಎಣಿಸಿರುವ ದೃಶ್ಯ ಕಂಡು ಬಂದರೆ ಪೊಲೀಸರು ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಪಾಂಡವಪುರ ಪೊಲೀಸರು ಆಟೋ ಮೂಲಕ ಕಾನೂನು ಎಚ್ಚರಿಕೆಯ ಪ್ರಚಾರ ನಡೆಸಿ, ಜೂಜಾಟ ನಿಷೇಧ ಮಾಲಾಗುವುದು ಎಂದು ತೀರ್ಮಾನಿಸಿದ್ದಾರೆ.

ಆದ್ದರಿಂದ ಯಾವುದೇ ಕಟ್ಟಡ, ಕೊಠಡಿ, ಬಯಲು ಪ್ರದೇಶ ಹಾಗೂ ಇನ್ನಿತರ ಪ್ರದೇಶದಲ್ಲಿ ಜೂಜಾಟ ಆಡಂಗಿಲ್ಲ. ಜೂಜಿನಿಂದ ಕೋಟ್ಯಾಂತರ ರೂಗಳಷ್ಟು ವ್ಯವಹಾರ ನಡೆಯುತ್ತದೆ. ಇಂತಹ ಜೂಜಾಟವನ್ನು ಪೊಲೀಸರು ತಡೆಯುವ ಕರ್ತವ್ಯವಾಗಿದೆ. ಪೊಲೀಸರು ತಡೆಯದಿದ್ದರೆ ಅನೇಕರು ಸಾಲಗಾರರಾಗಿ ಕಷ್ಟ ಅನುಭವಿಸುವ ಸಂದರ್ಭ ಉಂಟಾಗಲಿದೆ.

ಇಸ್ಪೀಟ್ ಆಟ ಇಷ್ಟ ಇಲ್ಲದವರು ಪಚ್ಚಿ ಆಟಕ್ಕೆ ಮೊರೆ ಹೋಗುತ್ತಾರೆ. ಮನೆಯಲ್ಲಿ ಚೌಕಾಕಾರದ ಮನೆಗಳಿರುವ ಘಟ್ಟ ಬರೆದುಕೊಂಡು ಚೌಕಾಬಾರ ಆಟ ಆಡುತ್ತಾರೆ. ಇದು ಸಾಮಾನ್ಯ.

ಆದರೆ ಇಸ್ಪೀಟ್ ಆಟದಿಂದ ಅನೇಕರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಲಿದ್ದಾರೆ ಎಂಬ ಉದ್ದೇಶದಿಂದ ಪೊಲೀಸರು ಜೂಜಾಟ ನಿಷೇಧ ಎಂಬ ಕಾನೂನು ಜಾರಿಗೊಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ