ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮರಿಮಾದಪ್ಪ ಉಪಾಧ್ಯಕ್ಷರಾಗಿ ಎಲ್ ಸುಧಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯ 14 ಸದಸ್ಯತ್ವ ಬಲದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮರಿಮಾದಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಧಾ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣಾಧಿಕಾರಿ ಚಂದ್ರಪಾಟಿಲ್ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷನೆ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಓಂಪ್ರಕಾಶ್ ಮಾತನಾಡಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಶಿವಣ್ಣ ಅವರ ಸಹಕಾರದೊಂದಿಗೆ ಬಂಡೂರು ಗ್ರಾಮಪಂಚಾಯಿತ ಕಾಂಗ್ರೆಸ್ ಬೆಂಬತ ಅಭ್ಯರ್ಥಿಗಳು ಅಧ್ಯಕ್ಷರಾಗಿದ್ದು, ಎಲ್ಲಾ ಸಹಕಾರದೊಂದಿಗೆ ಗ್ರಾಮಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಮುಖಂಡರಾದ ಚಿಕ್ಕಲಿಂಗಯ್ಯ ಪುಟ್ಟಬಸವಯ್ಯ, ಮಂಜುನಾಥ್, ರಮೇಶ್, ದೇವರಾಜು, ಮಹದೇವಸ್ವಾಮಿ, ಶ್ವೇತಾ ಮಹೇಶ್, ಮಹದೇವಸ್ವಾಮಿ ಗುರುಮಲ್ಲಪ್ಪ ಶಿಲ್ಪ ಸುಬ್ಬಣ್ಣ ಸುಧಾ ನಾಗರಾಜು, ವಸಂತ ಮಂಜುನಾಥ್, ರಮ್ಯ ಮಲ್ಲೇಶ್, ಗೀತಾ ಶಿವಮಲ್ಲು,ರಮ್ಯ ವೆಂಕಟೇಶ್ ಸೇರಿದಂತೆ ಇತರರು ಅಭಿನಂದಿಸಿದರು.




