Saturday, November 21, 2026

ಪ್ರಾಯೋಗಿಕ ಆವೃತ್ತಿ

ಹೆದ್ದಾರಿ ಪ್ರಾಧಿಕಾರಕ್ಕೆ ಚಾಕಲೇಟ್ ಕೊಡುತ್ತಿರುವ ಚಾಲಕರು !

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೈಸೂರು ಕಡೆಯ ಟೋಲ್ ಪ್ರಾರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆಚ್ಚಿನ ವಾಹನಗಳ ನಿರೀಕ್ಷೆಯಿಂದ ವಿಶಾಲವಾಗಿ ಟೋಲ್ ಪ್ಲಾಜಾ ವನ್ನು ಗಣಂಗೂರಿನ ಬಳಿ ನಿರ್ಮಿಸಿಕೊಂಡು ಕಾರಿಗೆ ₹185, ಲಾರಿ, ಬಸ್ಸಿಗೆ ₹460 ದರ ನಿಗದಿ ಮಾಡಿಕೊಂಡು ಕಾಯುತ್ತಿದ್ದಾರೆ.

ಆದರೆ, ಚಾಲಕಿ ಚಾಲಕರು ಮಾತ್ರ ತೂಬಿನಕೆರೆ ಮತ್ತು ಶ್ರೀರಂಗಪಟ್ಟಣ ಬಳಿ ಇರುವ ಆಗಮನ (ಎಂಟರಿ) ಮತ್ತು ಎಕ್ಸೈಟ್ ಪಾಯಿಂಟ್(ನಿರ್ಗಮನ) ಬಳಸಿಕೊಂಡು ಸರಿಸಮಾರು ಹತ್ತು ಕಿಲೋಮೀಟರ್ ಸರ್ವಿಸ್ ರಸ್ತೆ ಬಳಸಿ ಮತ್ತೆ ಹೈವೇ ಸೇರಿಕೊಳ್ಳುತ್ತಿದ್ದಾರೆ.

ಇದರಿಂದ ಹೆದ್ದಾರಿ ಪ್ರಾಧಿಕಾರ ಟೋಲ್ ಬಳಿ ಎತ್ತರದ ತಂತಿ ಬೇಲಿ ಹಾಕಿಕೊಂಡು ಭರ್ಜರಿ ಕಲೆಕ್ಷನ್ ಮಾಡಲು ತಯಾರಿ ಮಾಡಿಕೊಂಡು ಚಾಪೆ ಕೆಳಗೆ ನುಸುಳುವ ಯೋಚನೆ ಮಾಡಿದ್ದರೆ, ಕಿಲಾಡಿ ವಾಹನ ಚಾಲಕರು ರಂಗೋಲಿ ಕೆಳಗೆ ನುಗ್ಗಿ ಪ್ರಾಧಿಕಾರದ ಟೋಲ್ ವಸೂಲಿ ಲೆಕ್ಕಾಚಾರವನ್ನು ತಲೆಕೆಳಗೂ ಮಾಡುತ್ತಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ