Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಕಿರುಗಾವಲಿನಲ್ಲಿ ಬಸವಣ್ಣನ ಪುತ್ಥಳಿ ಅನಾವರಣ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ಬಸವೇಶ್ವರ ಮಠದ ಬಸವ ಕೇಂದ್ರ ಬಸವ ಸಮಿತಿ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀಬಸವಣ್ಣನವರ ಪುತ್ಥಳಿ ಅನಾವರಣ ಸಮಾರಂಭದ ಏಪ್ರಿಲ್ 13ರ ಭಾನುವಾರ ಸಂಜೆ 4 ಗಂಟೆಗೆ ಶ್ರೀ ಬಸವೇಶ್ವರ ಮಠದ ಬೀದಿಯ ಮಹಾಮನೆಯಲ್ಲಿ ನಡೆಯಲಿದೆ ಎಂದು ಬಸವ ಸಮಿತಿ ಅಧ್ಯಕ್ಷ ಶರಣ ಹೆಚ್.ವಿ.ನಾಗರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮೋಕ್ಷಪತಿ ಮಹಾಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಶ್ರೀಮಲ್ಲಿಕಾರ್ಜುನ ಮಹಾಸ್ವಾಮೀಜಿ ನೆರವೇರಿಸುವರು. ಮೈಸೂರಿನ ಶರಣ ವಚನ ಕುಮಾರಸ್ವಾಮಿ ಉಪನ್ಯಾಸ ಮಾಡಲಿದ್ದಾರೆ , ಕೂಡಲ ಸಂಘದ ಶರಣರ ವಿಷಯದ ಬಗ್ಗೆ ಮಂಗಲಮೂರ್ತಿ ಮಾತನಾಡಲಿದ್ದಾರೆ, ಅನುಭವ ನುಡಿಗಳನ್ನು ಶರಣ ಚೌವಳ್ಳಿ ಲಿಂಗರಾಜಪ್ಪ ನುಡಿಯಲಿದ್ದಾರೆ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಶರಣ ಹೆಚ್.ಪಿ.ಶಿವಸ್ವಾಮಿ, ಮುಖ್ಯ ಅತಿಥಿಗಳಾಗಿ ಶರಣ ಎಸ್.ದಯಾಶಂಕರ್, ದಾಸೋಹ ದಾನಿಗಳಾದ ಶರಣ ಕೆ.ಎಂ.ಬಾಲಚಂದ್ರ ಭಾಗವಹಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶರಣ ಶರಣಿಯರಿಗೆ ಸನ್ಮಾನಿಸಲಾಗುವುದು. ಆದ್ದರಿಂದ ಸಮಾಜ ಬಂಧುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ