ಮಂಡ್ಯ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಬಿ. ಎಂ. ಮಹೇಶ್ ಅವಿರೋಧವಾಗಿ 2ನೇ ಬಾರಿ ಆಯ್ಕೆಯಾಗಿದ್ದಾರೆ.
ಬುಧವಾರ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
17 ಸದಸ್ಯ ಬಲದ ಗ್ರಾ.ಪಂ.ಸದಸ್ಯರಲ್ಲಿ ಬಿ.ಎಂ.ಮಹೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಕುಮಾರಸ್ವಾಮಿ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಉಪಾಧ್ಯಕ್ಷರಾದ ಬಿ. ಎಂ. ಮಹೇಶ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಮಹೇಶ್ ಅವರು ಗ್ರಾಪಂನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ವೇಳೆ ನೂತನ ಉಪಾಧ್ಯಕ್ಷರನ್ನು ಸದಸ್ಯರಾದ ಕಾಳೇಗೌಡ, ಲೋಕೇಶ್, ಯೋಗೇಶ್, ರಮೇಶ್, ಜಯರತ್ನ, ಎಚ್ ಕೆ ಮಂಜುಳ, ಲೀಲಾವತಿ, ನರಸಮ್ಮ, ಶಿಲ್ಪ ಶ್ರೀ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು.




