ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೀತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತ್ರಿಭಾಷಾ ನೀತಿಯ ಹೆಸರಿನಲ್ಲಿ ಹಿಂದಿ ವಿಷಯವನ್ನು ಬಲವಂತವಾಗಿ ಕಲಿಸಲಾಗುತ್ತಿದ್ದು, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕೆಂದು ಒತ್ತಾಯ ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ನೇತೃತ್ವದಲ್ಲಿ ಮಂಡ್ಯ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024ರ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿಗಳು ಪದೇ ಪದೇ ಮಾಧ್ಯಮಗಳಲ್ಲಿ ದ್ವಿಭಾಷಾ ನೀತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. 1992ರವರೆಗೂ 10ನೇ ತರಗತಿ ಹಿಂದಿ ವಿಷಯಕ್ಕೆ ಕೇವಲ 50 ಅಂಕಗಳಿದ್ದವು. ನಂತರ ಅದನ್ನು 100 ಅಂಕಗಳಿಗೆ ಏರಿಸಿ ಕರ್ನಾಟದ ಜನರ ಮೇಲೆ ಹಿಂದಿ ಹೇರಿಕೆ ತೀವ್ರಗೊಳಿಸಲಾಗಿದೆ ಎಂದು ಖಂಡಿಸಿದರು.
ಕನ್ನಡ ಕರ್ನಾಟಕದ ಹಿತದೃಷ್ಟಿಯಿಂದ ಶಾಲಾ ಪಠ್ಯದಲ್ಲಿ ಹಿಂದಿ ವಿಷಯವನ್ನು ರದ್ದುಗೊಳಿಸಿ, ದ್ವಿಭಾಷಾ ನೀಡಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್, ಮುದ್ದೇಗೌಡ, ಜೋಸೆಫ್, ಶಿವರಾಮ ಹಾಗೂ ರಮೇಶ್ ಉಪಸ್ಥಿತರಿದ್ದರು.




